ಕರ್ನಾಟಕ

karnataka

ETV Bharat / state

ವಿಜಯಪುರ ಮರ್ಯಾದೆ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಲವರ್​ ಹೆಣ ನದಿಗೆಸೆಯುವ ಮುನ್ನವೇ ಪ್ರೇಯಸಿ ಆತ್ಮಹತ್ಯೆ - ಅಪ್ರಾಪ್ತ ಬಾಲಕಿಯ ಶವ ಪತ್ತೆ

ವಿಜಯಪುರ ಮರ್ಯಾದೆ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್. ಪ್ರೇಮಿಯನ್ನು ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆಯುವ ಮುನ್ನವೇ ಪ್ರೇಯಸಿ ವಿಷ ಸೇವಿಸಿ ಆತ್ಮಹತ್ಯೆ. ಆರೋಪಿಗಳ ತನಿಖೆ ವೇಳೆ ವಿಚಾರ ಬಹಿರಂಗ-ಎಸ್​ಪಿ ಆನಂದ ಕುಮಾರ್​ ಮಾಹಿತಿ.

Vijayapur Maryada Hatya case
ಎಸ್​ಪಿ ಆನಂದ ಕುಮಾರ್

By

Published : Oct 15, 2022, 7:29 PM IST

Updated : Oct 15, 2022, 8:16 PM IST

ವಿಜಯಪುರ: ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಮರ್ಯಾದೆ ಹತ್ಯೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರೇಮಿಯನ್ನು ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆಯುವ ಮುನ್ನವೇ ಪ್ರೇಯಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ. ಅದೇ ವಿಷವನ್ನು‌ ಕುಡಿಸಿ ಪ್ರೇಮಿಯನ್ನು ಕೊಂದು ಗೋಣಿ ಚೀಲದಲ್ಲಿ ಹಾಕಿ ಕೃಷ್ಣಾ ನದಿಗೆ ಎಸೆಯಲಾಗಿದೆ ಎಂದು ಎಸ್​ಪಿ ಆನಂದ ಕುಮಾರ್​ ಮಾಹಿತಿ ನೀಡಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆ: ಪ್ರೇಯಸಿ ತಂದೆ ಗುರಪ್ಪ ಹಾಗೂ ಮಾವ ಅಜೀತ್​ನನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆ ಹಾಗೂ ಯುವಕ ಮಲ್ಲಿಕಾರ್ಜುನ ಜಮಖಂಡಿ ಪ್ರೀತಿ ಮಾಡುತ್ತಿದ್ದರು. ಈ ನಡುವೆ ಇಬ್ಬರು ಏಕಾಂತದಲ್ಲಿದ್ದಾಗ ಅಪ್ರಾಪ್ತೆಯ ತಂದೆ ಗುರಪ್ಪನ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಅದಕ್ಕಾಗಿ ಅಪ್ರಾಪ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಅದೇ ವಿಷವನ್ನು ಪ್ರಿಯತಮ ಮಲ್ಲಿಕಾರ್ಜುನ ಜಮಖಂಡಿಗೆ ಕುಡಿಸಿ ಹತ್ಯೆಗೈದಿದ್ದರು. ನಂತರ ಎರಡು ಶವಗಳನ್ನು ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು. ಈ ಬಗ್ಗೆ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಎಸ್​ಪಿ ಆನಂದ ಕುಮಾರ್​ ತಿಳಿಸಿದರು.

ಮರ್ಯಾದೆ ಹತ್ಯೆ ಪ್ರಕರಣದ ಬಗ್ಗೆ ವಿಜಯಪುರ ಎಸ್​ಪಿ ಮಾಹಿತಿ

ಇದನ್ನೂ ಓದಿ:ರಾಜ್ಯದಲ್ಲಿ ಮರ್ಯಾದೆ ಹತ್ಯೆ: ಕಲಿಯುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಬಲೆಗೆ ಬಿದ್ದ ಹಕ್ಕಿಗಳು.. ಯುವಕ ಕೊಲೆ!

ಏನಿದು ಪ್ರಕರಣ:ಜಿಲ್ಲೆಯ ತಿಕೋಟಾ ತಾಲೂಕಿನ‌ ಘೋಣಸಗಿ ಗ್ರಾಮದ ಯುವಕ ಮಲ್ಲಿಕಾರ್ಜುನ ಜಮಖಂಡಿ ಹಾಗೂ ಕಳ್ಳಕವಟಗಿ ಗ್ರಾಮದ ಅಪ್ರಾಪ್ತ ಬಾಲಕಿ ವಿಜಯಪುರ ಕಾಲೇಜಿಗೆ ನಿತ್ಯ ಒಂದೇ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದರು. ಈ ನಡುವೆ ಇಬ್ಬರಿಗೂ ಪರಿಚಯವಾಗಿ ಬಳಿಕ ಪ್ರೇಮಾಂಕುರವಾಗಿತ್ತು. ಆದರೆ ಎರಡು ಮನೆ ಕಡೆಯಿಂದ ವಿರೋಧ ವ್ಯಕ್ತವಾಗಿ ಯುವಕ ಮಲ್ಲಿಕಾರ್ಜುನನ್ನು ಬನಹಟ್ಟಿ ಸೈನಿಕ ತರಬೇತಿ ಶಾಲೆಗೆ ಹಾಕಲಾಗಿತ್ತು.

ಆದರೂ ಪ್ರೀತಿ ಮಾಡುವುದನ್ನು ಬಿಡದ ಅವರು ಮೊಬೈಲ್​​ನಲ್ಲಿ ಸಂಭಾಷಣೆ ನಡೆಸುತ್ತಿದ್ದರು ಎನ್ನಲಾಗ್ತಿದೆ. ಸೆ.22ರಂದು ಬಿಎ ಸೆಮಿಸ್ಟರ್ ಪರೀಕ್ಷೆ ಬರೆಯಲು ಬಂದಿದ್ದ ಮಲ್ಲಿಕಾರ್ಜುನ ಅಂದು ರಾತ್ರಿ ಬೈಕ್ ತೆಗೆದುಕೊಂಡು ಹೋದವನು ಕಾಣಿಯಾಗಿದ್ದ. ನಂತರ ಅಕ್ಟೋಬರ್ 10ರಂದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹದರಿಹಾಳ ಗ್ರಾಮದ ಕೃಷ್ಣಾ ನದಿ ತಟದಲ್ಲಿ ಗೋಣಿ ಚೀಲದಲ್ಲಿ ಆತನ ಶವ ಪತ್ತೆಯಾಗಿತ್ತು.

ಆದರೆ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾಗಿರಲಿಲ್ಲ. ಈಗ ಬಂಧಿತ ಆರೋಪಿಗಳು ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಯುವಕನಿಗೆ ಅದೇ ವಿಷ ನೀಡಿ ಕೊಲೆ ಮಾಡಿ ಇಬ್ಬರ ಶವವನ್ನು ಪ್ರತ್ಯೇಕ ಚೀಲದಲ್ಲಿ ಹಾಕಿ ಕೃಷ್ಣಾ ನದಿಗೆ ಎಸೆಯಲಾಗಿದೆ ಎಂದು ತನಿಖೆ ವೇಳೆ ಬಾಯ್ಬಿಟ್ಟಿರುವ ಬಗ್ಗೆ ಎಸ್​ಪಿ ಆನಂದ ಕುಮಾರ್​ ತಿಳಿಸಿದ್ದಾರೆ.

ಒಟ್ಟಿನಲ್ಲಿ ಓದುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಪ್ರಣಯ ಎಂದು ಸುತ್ತಾಡಿದ್ದ ಜೋಡಿ ಕೊನೆಗೆ ಮರ್ಯಾದೆ ಹತ್ಯೆಗೀಡಾಗಿದ್ದಾರೆ.

ಇದನ್ನೂ ಓದಿ:ಮರ್ಯಾದಾ ಹತ್ಯೆ: ಅಕ್ಕನ ಕತ್ತು ಹಿಸುಕಿ, ಆಕೆಯ ಪ್ರಿಯಕರನಿಗೆ ಗುಂಡಿಕ್ಕಿದ ಅಪ್ರಾಪ್ತ ತಮ್ಮ

Last Updated : Oct 15, 2022, 8:16 PM IST

ABOUT THE AUTHOR

...view details