ಕರ್ನಾಟಕ

karnataka

ETV Bharat / state

ಮಾಸ್ಕ್ ಬದಲಿಸಿಕೊಂಡ ನವಜೋಡಿ.. ಮದುವೆಯಲ್ಲಿ ಕೊರೊನಾ ಜಾಗೃತಿ - ಮಾಸ್ಕ್ ಬದಲಿಸಿಕೊಂಡ ನವಜೋಡಿ

ಕೊರೊನಾ ಜಾಗೃತಿ ಮೂಡಿಸಿ ನಾವು ನವಜೀವನಕ್ಕೆ ಕಾಲಿರಿಸುತ್ತಿರುವುದು ನಮಗೆ ಮರೆಯಲಾಗದ ಅನುಭವ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಮೂಲ್ಯ ಜೀವಗಳನ್ನು ಉಳಿಸುವ ಕಾರ್ಯ ಮಾಡಬೇಕು..

ಮದುವೆ
ಮದುವೆ

By

Published : May 21, 2021, 4:58 PM IST

ಮುದ್ದೇಬಿಹಾಳ :ಎಲ್ಲೆಡೆ ಕೊರೊನಾದ್ದೇ ಅಬ್ಬರ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಶುಭ ಕಾರ್ಯಗಳೇ ಅಪರೂಪವಾಗಿವೆ. ಈ ನಡುವೆ ಮದುವೆ ಕಾರ್ಯಕ್ರಮವೊಂದರಲ್ಲಿ ನವಜೀವನಕ್ಕೆ ಕಾಲಿರಿಸಿದ ದಂಪತಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ತಾಲೂಕಿನ ಕವಡಿಮಟ್ಟಿ ಶ್ರೀ ಘನಮಠೇಶ್ವರ ತಪೋವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ, ವಿಶ್ವಭಾರತಿ ಪಬ್ಲಿಕ್ ಸ್ಕೂಲ್​ನ ಅಧ್ಯಕ್ಷ ವೀರೇಶ್ ಗುರುಮಠ ಹಾಗೂ ಪುಷ್ಪಾ ಎಂಬ ಜೋಡಿ ಇಂದು ಮದುವೆಯಾದರು.

ಈ ವೇಳೆ ಹಾರಗಳನ್ನು ಬದಲಿಸಿಕೊಂಡ ಬಳಿಕ ಮಾಸ್ಕ್‌ನ ವಧುವಿಗೆ ವರ, ವರನಿಗೆ ವಧು ತೊಡಿಸಿ ವಿನೂತನ ಮದುವೆಗೆ ಸಾಕ್ಷಿಯಾದರು.

ಮದುವೆಯಲ್ಲಿ ಕೊರೊನಾ ಜಾಗೃತಿ

ಇದೇ ವೇಳೆ ಮಾತನಾಡಿದ ವೀರೇಶ್ ಹಾಗೂ ಪುಷ್ಪಾ ದಂಪತಿ, ಕೊರೊನಾ ಜಾಗೃತಿ ಮೂಡಿಸಿ ನಾವು ನವಜೀವನಕ್ಕೆ ಕಾಲಿರಿಸುತ್ತಿರುವುದು ನಮಗೆ ಮರೆಯಲಾಗದ ಅನುಭವ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಮೂಲ್ಯ ಜೀವಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದರು.

ಕುಂಟೋಜಿ ರುದ್ರಮುನಿ ಸ್ವಾಮೀಜಿ ಮಾತನಾಡಿ, ಸರ್ಕಾರದ ನಿರ್ದೇಶನವನ್ನು ನಾವೆಲ್ಲ ಪಾಲಿಸಿದರೆ ಕೊರೊನಾ ನಿಯಂತ್ರಣ ಸಾಧ್ಯವಿದೆ ಎಂದರು.

ABOUT THE AUTHOR

...view details