ವಿಜಯಪುರ: ಗಣೇಶ ಚತುರ್ಥಿ ಬಳಿಕ ಬರುವ ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಸರ್ಕಾರ ನಿರ್ಬಂಧ ವಿಧಿಸಿ ಕೇವಲ ಸಾಂಕೇತಿಕವಾಗಿ ಹಬ್ಬ ಆಚರಿಸಲಾಗಿತ್ತು. ಆದ್ರೆ, ಈ ಬಾರಿ ಯಾವುದೇ ಕಟ್ಟುಪಾಡುಗಳಿಲ್ಲದೆ ಮತ್ತೆ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿದೆ. ಇತ್ತ ಬಸವನಾಡು ವಿಜಯಪುರ ನಗರದಲ್ಲಿ ಸಹ ನವರಾತ್ರಿ ಹಬ್ಬಕ್ಕೆ ಭಕ್ತರು ಸಡಗರಿಂದ ಸಿದ್ಧರಾಗುತ್ತಿದ್ದಾರೆ.
ನಾಡ ದೇವಿ, ತುಳಜಾ ಭವಾನಿ, ಚಂಡಿ ಚಾಮುಂಡಿ ಆರಾಧನೆಗೆ ಜನರು ಭಕ್ತಿ ಪೂರ್ವಕವಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ನವರಾತ್ರಿ ಆಚರಣೆ ಹಿನ್ನೆಲೆ ದೇವಿ ಮೂರ್ತಿಗಳಿಗೆ ಫೈನಲ್ ಟಚ್ ಅಪ್ ಮಾಡಲಾಗುತ್ತಿದೆ. ನಗರದ ಉಪ್ಪಲಿ ಬುರುಜ್ ಹತ್ತಿರವಿರುವ ಪ್ರಸಿದ್ಧ ಕಲಾವಿದ ಕಾಳೆ ಕುಟುಂಬಸ್ಥರು ಇದೀಗ ದೇವಿ ಮೂರ್ತಿಗಳನ್ನು ವಿವಿಧ ಬಣ್ಣಗಳ ಮೂಲಕ ಸಿಂಗರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು 30ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಲಾಗಿದೆ.