ಕರ್ನಾಟಕ

karnataka

ETV Bharat / state

5 ವರ್ಷದಿಂದ 'ನವರಸಪುರ ಉತ್ಸವ'ಕ್ಕೆ ಗ್ರಹಣ : ಈ ವರ್ಷವಾದ್ರೂ ನಡೆಯುತ್ತಾ?

ಸಾಹಿತ್ಯ, ಕಲೆಯನ್ನು ಪ್ರದರ್ಶಿಸುವ ನವರಸಪುರ ಉತ್ಸವ ನಾನಾ ಕಾರಣಕ್ಕೆ ಕಳೆದ 5 ವರ್ಷಗಳಿಂದ ನಿಂತು ಹೋಗಿದೆ. ಈ ವರ್ಷವಾದರೂ ಸರ್ಕಾರ, ಜಿಲ್ಲಾಡಳಿತ ಉತ್ಸವವನ್ನು ಪುನಾರಂಭಿಸಬೇಕು ಎಂಬುದು ಜನರ ಒತ್ತಾಯ..

navarasapura-festival
ನವರಸಪುರ ಉತ್ಸವ

By

Published : Mar 28, 2022, 5:09 PM IST

Updated : Mar 28, 2022, 9:12 PM IST

ವಿಜಯಪುರ :ಜಿಲ್ಲೆಯಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತಿದ್ದ ಸಾಂಸ್ಕ್ರತಿಕ ಚಟುವಟಿಕೆಯ ನವರಸಪುರ ಉತ್ಸವಕ್ಕೆ ಗ್ರಹಣ ಬಡಿದಿದೆ. ಕಳೆದ 5 ವರ್ಷಗಳಿಂದಲೂ ಒಂದಿಲ್ಲೊಂದು ಕಾರಣಕ್ಕೆ ಉತ್ಸವವನ್ನು ಮುಂದೂಡುತ್ತಲೇ ಬರಲಾಗುತ್ತಿದೆ. ಪ್ರವಾಹ, ಬರಗಾಲ, ಕೋವಿಡ್​ ಸಾಂಕ್ರಾಮಿಕ ಈ ರೀತಿ ಉತ್ಸವಕ್ಕೆ ಅಡ್ಡಿಯಾಗುತ್ತಲೇ ಇವೆ.

ಉತ್ಸವದ ಹಿನ್ನೆಲೆ : ಆದಿಲ್​ಶಾಹಿ ರಾಜರು ಧಾರ್ಮಿಕ ಸಾಮರಸ್ಯಕ್ಕೆ ನೀಡಿದ ಕೊಡುಗೆ ಅಪಾರ. ಅದೇ ರೀತಿ ಎರಡನೇ ಇಬ್ರಾಹಿಂ ಮೊದಲು ಬಾರಿ ನವರಸಪುರದಲ್ಲಿ ಸಂಗೀತ ಮಹಲ್ ನಿರ್ಮಿಸಿ ಪ್ರತಿ ಗುರುವಾರ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿದ್ದರು. 1989-90ರಲ್ಲಿ ಇದೇ ನವರಸಪುರದ ಸಂಗೀತ ಮಹಲಿನಲ್ಲಿ ನವರಸಪುರ ಉತ್ಸವವನ್ನು ಆರಂಭಿಸಲಾಯಿತು.

5 ವರ್ಷದಿಂದ 'ನವರಸಪುರ ಉತ್ಸವ'ಕ್ಕೆ ಗ್ರಹಣ : ಈ ವರ್ಷವಾದ್ರೂ ನಡೆಯುತ್ತಾ?

ಪಟ್ಟದಕಲ್ಲು, ಹಂಪಿಗಳಲ್ಲಿ ಈ ರೀತಿಯ ಉತ್ಸವ ನಡೆಯುತ್ತವೆ. ಆದರೆ, ಕಳೆದ 5 ವರ್ಷಗಳಿಂದ ನವರಸಪುರದಲ್ಲಿ ಉತ್ಸವ ನಿಂತು ಹೋಗಿದೆ. ಉತ್ಸವಕ್ಕೆಂದು ಸರ್ಕಾರ ನೀಡಿದ ಅನುದಾನವನ್ನೂ ಕೂಡ ವಾಪಸ್ ತೆಗೆದುಕೊಳ್ಳಲಾಗಿದೆ. ಸದ್ಯ ಕೋವಿಡ್​ ತಗ್ಗಿದೆ. ಜನತೆ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ನವರಸಪುರ ಉತ್ಸವವನ್ನು ಪುನಾರಂಭಿಸಲು ಜಿಲ್ಲಾಡಳಿತ ಮನಸ್ಸು ಮಾಡಿದೆ.

'ಇಚ್ಛಾಶಕ್ತಿಯ ಕೊರತೆ' : ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ವಿಜಯಪುರದ ಜನರ ಬೇಡಿಕೆಯನ್ನು ಜಿಲ್ಲಾಡಳಿತ ಜನಪ್ರತಿನಿಧಿಗಳ ಗಮನಕ್ಕೆ ತರಬೇಕಿದೆ. ಜನಪ್ರತಿನಿಧಿಗಳೂ ಕೂಡ ಸರ್ಕಾರದ ಮೇಲೆ ಉತ್ಸವ ಆಚರಣೆಗೆ ಒತ್ತಡ ಹೇರಬೇಕಾಗಿದೆ. ಇತ್ತೀಚಿಗೆ ನಡೆದ 17ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿ ವರ್ಷ ವಿಜಯಪುರದ ನವರಸಪುರದಲ್ಲಿ ಉತ್ಸವ ನಡೆಸಬೇಕು. ಈ ಮೂಲಕ ಜಿಲ್ಲೆಯ ಸಾಹಿತ್ಯ ಶ್ರೀಮಂತಿಕೆ ಪರಿಚಯ, ಬಡಕಲಾವಿದರ ನೆರವಿಗೆ ಬರುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಇದನ್ನೂ ಓದಿ:ಚೆನ್ನೈನ ಬೀದಿಗಳಲ್ಲಿ ನಸುಕಿನ ಜಾವ ಸೈಕಲ್‌ನಲ್ಲೇ ತಿರುಗಿ ಪೊಲೀಸರ ಕರ್ತವ್ಯ ಪರೀಕ್ಷಿಸಿದ ಮಹಿಳಾ IPS ಅಧಿಕಾರಿ!

Last Updated : Mar 28, 2022, 9:12 PM IST

ABOUT THE AUTHOR

...view details