ವಿಜಯಪುರ: ನಗರದ ರವೀಂದ್ರನಾಥ ಟ್ಯಾಗೋರ್ ಶಾಲೆಯ ಮಕ್ಕಳು ವಿಜ್ಞಾನ, ಗಣಿತ, ಕರಕುಶಲ ವಸ್ತುಗಳ ಪ್ರದರ್ಶನ ಮಾಡುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಮಾಡಿದರು.
ಕರಕುಶಲ ವಸ್ತುಗಳ ಪ್ರದರ್ಶನ ಮೂಲಕ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ - ಪ್ರಥಮ ನೋಬೆಲ್ ಪ್ರಶಸ್ತಿ ವಿಜೇತ ಸಿ ವಿ ರಾಮನ್
ವಿಜಯಪುರ ನಗರದ ರವೀಂದ್ರನಾಥ ಟ್ಯಾಗೋರ್ ಶಾಲೆಯ ಮಕ್ಕಳು ವಿಜ್ಞಾನ, ಗಣಿತ, ಕರಕುಶಲ ವಸ್ತುಗಳ ಪ್ರದರ್ಶನ ಮಾಡುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಮಾಡಿದರು.
ರವೀಂದ್ರನಾಥ ಟ್ಯಾಗೋರ್ ಶಾಲೆಯ ಮಕ್ಕಳು ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ, ಗಣಿತ ವಿಷಯಗಳ ಕುರಿತು ಅರಿವು ಮೂಡಿಸುವ ಮಾದರಿ ವಸ್ತುಗಳನ್ನ ತಯಾರಿಸಿ ಪ್ರದರ್ಶನ ಮಾಡಿದ್ರು. ವಸ್ತು ಪ್ರದರ್ಶನದಲ್ಲಿ ಸರಳವಾಗಿ ಗಣಿತ ವಿಷಯವನ್ನು ಅರಿಗಿಸಿಕೊಳ್ಳುವ ಹಾಗೂ ಜಲಸಂರಕ್ಷಣೆ, ವಿದ್ಯುತ್ ಉಳಿತಾಯ, ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಮಾದರಿಗಳ ಪ್ರಾತ್ಯಕ್ಷಿಕೆ ತಯಾರಿಸಿ, ಪ್ರದರ್ಶನ ಮಾಡಿ ಮಾಹಿತಿ ನೀಡಿದ್ರು.
ಈ ಕುರಿತು ಶಾಲಾ ಆಡಳಿತ ಮಂಡಳಿ ಮುಖಂಡ ಶಿವಾಜಿ ಗಾಯಕವಾಡ ಈಟಿವಿ ಭಾರತದೊಂದಿಗೆ ಮಾತನಾಡಿ, ನಮ್ನ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ದಿನದ ಆಚರಣೆಯಲ್ಲಿ ಸಂತಸದಿಂದ ಪಾಲ್ಗೊಂಡಿದ್ದಾರೆ. ಸುಮಾರು 300 ಜನ ವಿದ್ಯಾರ್ಥಿಗಳು 140ಕ್ಕೂ ಅಧಿಕ ಮಾದರಿಗಳನ್ನ ಪ್ರದರ್ಶನ ಮಾಡಿದ್ದಾರೆ ಎಂದರು.