ವಿಜಯಪುರ:ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ ಇಬ್ಭಾಗವಾಗಲಿದೆ. ಸಿದ್ದರಾಮಯ್ಯ ಮತಕ್ಕಾಗಿ ಮುಸ್ಲಿಂರನ್ನು ಓಲೈಕೆ ಮಾಡುತ್ತಿದ್ದಾರೆ. ಜತೆಗೆ ರಾಹುಲ್ ಗಾಂಧಿ ವಿರುದ್ಧ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ನಳಿನ್ ಕುಮಾರ್ ಕಟೀಲ್ ಒಬ್ಬ ಮೆಚ್ಯೂರಿಟಿ ಇಲ್ಲದ ರಾಜಕಾರಣಿ ಎಂದು ಜರಿದಿದ್ದಾರೆ.
'ಕಟೀಲ್ ಒಬ್ಬ ಮೆಚ್ಯೂರಿಟಿ ಇಲ್ಲದ ರಾಜಕಾರಣಿ'- ರಾಹುಲ್ ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷಗೆ ಸಿದ್ದು ತಿರುಗೇಟು ಸಿಂದಗಿ ಮತಕ್ಷೇತ್ರದ ಸುಂಗಠಾಣದಲ್ಲಿ ಮಾತನಾಡಿದ ಅವರು, ಈ ರೀತಿ ಬೇಜವಾಬ್ದಾರಿ ರಾಜಕಾರಣಿಯನ್ನು ನಾನು ನೋಡಿಲ್ಲ, ಅವರು ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ರಾಹುಲ್ ಗಾಂಧಿ ವಿರುದ್ಧ ಬೇಜವಾಬ್ದಾರಿಯಿಂದ ಮಾತನಾಡಿರುವುದನ್ನು ಖಂಡಿಸುತ್ತೇನೆ. ಬಿಜೆಪಿ ವರಿಷ್ಠರು ಕಟೀಲರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
'ನಳಿನ್ ಕುಮಾರ್ ಕಟೀಲ್ ಮಾನಸಿಕ ಅಸ್ವಸ್ಥ'
ಬೆಂಗಳೂರಿನಲ್ಲಿ ಮಾತನಾಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ನಳಿನ್ ಕುಮಾರ್ ಕಟೀಲ್ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ಎಂತಹ ಅವಿವೇಕಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಅನ್ನೋದನ್ನ ಇದು ತೋರಿಸುತ್ತೆ. ರಾಜ್ಯಾಧ್ಯಕ್ಷರಾದವರ ಮನಸ್ಸು ಎಷ್ಟು ಕೊಳಕಾಗಿದೆ ಅನ್ನೋದು ಇದರಿಂದ ಗೊತ್ತಾಗುತ್ತೆ ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದ ಕಟೀಲ್‌ಗೆ ದಿನೇಶ್ ಗುಂಡೂರಾವ್ ತಿರುಗೇಟು ನಳಿನ್ ಕುಮಾರ್ ಕಟೀಲ್, ಯತ್ನಾಳ್, ಸಿ.ಟಿ.ರವಿ, ಅನಂತ ಕುಮಾರ್ ಹೆಗ್ಡೆ ಅಂತವರೇ ಇವರಿಗೆ ಹೀರೋಗಳು. ಅವರು ಆಡುವ ಮಾತು ಎಂತದ್ದು ಬಳಸುವ ಭಾಷೆ ಎಂತದ್ದು? ಇಂತವರನ್ನ ಬೆಂಬಲಸುವವರೇ ನರೇಂದ್ರ ಮೋದಿ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ. ಇವರನ್ನು ಕೂಡಲೇ ವಜಾ ಮಾಡಬೇಕು. ಬಾಯಿ ಮುಚ್ಚಿಕೊಂಡು ಇರಪ್ಪ ಅಂತ ಬುದ್ಧಿ ಹೇಳಬೇಕು ಎಂದರು.
'ಕುಮಾರಸ್ವಾಮಿಯಿಂದ ಬ್ಲಾಕ್ ಮೇಲ್ ರಾಜಕೀಯ'
ಮುಸ್ಲಿಂ ನಾಯಕರನ್ನು ಸಿದ್ದರಾಮಯ್ಯ ತುಳಿಯುತ್ತಿದ್ದಾರೆ ಎಂಬ ಹೆಚ್‌ಡಿಕೆ ಆರೋಪ ವಿಚಾರವಾಗಿ ಮಾತನಾಡಿದ ಗುಂಡೂರಾವ್, ಅವರ ಉದ್ದೇಶ ಬೇರೆ, ಮೇಜಾರಿಟಿ ಬರಬಾರದು ಅಂತ ಹಾಗೆ ಮಾತನಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಯಾವುದೇ ಬದ್ಧತೆ ಇಲ್ಲ. ತತ್ವ ಸಿದ್ಧಾಂತ ಯಾವುದೂ ಗೊತ್ತಿಲ್ಲ. ವೈಯಕ್ತಿಕ ಲಾಭಕ್ಕಾಗಿ ರಾಜಕೀಯ ಮಾಡ್ತಾರೆ. ಸುತ್ತ 15 ಶಾಸಕರು ಇದ್ರೆ ಸಾಕು ಅವರಿಗೆ. ಬ್ಲಾಕ್ ಮೇಲ್ ರಾಜಕೀಯ ಮಾಡ್ತಾ ಇದ್ದಾರೆ. ಕಿಂಗ್ ಮೇಕರ್ ಆಗಬೇಕು ಅನ್ನುವುದಷ್ಟೇ ಅವರ ಉದ್ದೇಶ. ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಾ ಇದ್ದಾರೆ. ರಾಜ್ಯ ದೇಶದ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆ ಖಂಡಿಸಿ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮಾಡಿದ್ದಾರೆ.