ಮುದ್ದೇಬಿಹಾಳ : ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಎಸ್ಸಿಪಿ/ಟಿಎಸ್‌ಪಿ ಅನುದಾನವನ್ನು ಪ್ಯಾಕೇಜ್ ರೂಪದಲ್ಲಿ ಟೆಂಡರ್ ಕರೆದು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಎಸ್ಸಿ, ಎಸ್ಟಿ ಜನಾಂಗದವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್. ನಾಡಗೌಡ ಅಪ್ಪಾಜಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಸಿ ಕಾಲನಿಯ ರಸ್ತೆ ಮಾಡಲು ನ್ಯಾಶನಲ್ ಹೈವೇ ಮಾಡುವ ಮಷಿನ್ ಬೇಕಾಗುತ್ತದೆಯೇ. ಯಾರು ರೀ ಅವನು ಎಕ್ಸಿಕ್ಯೂಟಿವ್ ಎಂಜಿನಿಯರ್ ? ಕತ್ತೆ ಕಾಯ್ತಿದ್ದಾನಾ? ಮನುಷ್ಯರಲ್ಲ ಇವ್ರು, ಮನುಷ್ಯ ರೂಪದ ರಾಕ್ಷಸರು. ಯಾರ ಕೈಗೊಂಬೆಯಾಗಿ ಈ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂಬುದು ಹೊರ ಬರಬೇಕು. ಯಾರೂ ಕೇಳುವವರಿಲ್ಲ ಎಂದು ತಿಳಿದಿದ್ದಾರೋ ಹೇಗೆ? ಎಂದು ನಾಡಗೌಡರು ಆಕ್ರೋಶ ಹೊರಹಾಕಿದರು.