ಹೊಸಪೇಟೆ:ವಿಜಯನಗರ ಉಪಚುನಾವಣೆಯಲ್ಲಿ ಈ ಬಾರಿ ಆನಂದ ಸಿಂಗ್ ಅವರು ಏನೇ ಮಾಡಿದರು ಮತ್ತೊಮ್ಮೆ ಶಾಸಕರಾಗಲು ಸಾಧ್ಯವಿಲ್ಲ ಎಂದು ರಾಜ್ಯ ಜೆಡಿಎಸ್ ಉಪಕಾರ್ಯದರ್ಶಿ ಎನ್.ಎಂ ನಬಿ ಭವಿಷ್ಯ ನುಡಿದರು.
ರಾಜ್ಯ ಜೆಡಿಎಸ್ ಉಪಕಾರ್ಯದರ್ಶಿ ಎನ್.ಎಂ ನಬಿ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆನಂದ ಸಿಂಗ್ ಮುಂದಿನ ರಾಜಕೀಯ ಕೂಸು. ನಾನು ಶಾಸಕ ಮತ್ತು ಸಚಿವನಾಗಿದ್ದಾಗ ಆನಂದ ಸಿಂಗ್ ಅಂಗನವಾಡಿ ಶಾಲೆಗೆ ಹೋಗುತ್ತಿದ್ದಿರಬಹುದು. ಈ ಭಾರಿ ಆನಂದ್ ಸಿಂಗ್ ಶಾಸಕರಾಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ವಿಜಯನಗರ (ಹೊಸಪೇಟೆಯ) ಹೊಸ ಜಿಲ್ಲೆಗೆ ಕೂಡ್ಲಗಿ ತಾಲೂಕನ್ನು ಸೇರಿಸಬೇಕು. ಬಳ್ಳಾರಿ ಜಿಲ್ಲೆಗೆ ಸೇರಿಸುವುದು ಸರಿ ಅಲ್ಲ. ಕೂಡ್ಲಿಗಿ ತಾಲೂಕು ಹೊಸಪೇಟೆಗೆ ತುಂಬಾ ಹತ್ತಿರವಾಗುತ್ತದೆ. ವಿಜಯ ನಗರಕ್ಕೆ ಮತ್ತು ಕೂಡ್ಲಗಿಗೆ ತುಂಬಾ ನಂಟಿದೆ ಎಂದರು.
ನಾನು ಬಡವರಿಗೆ, ದಿನ ದಲಿತರಿಗೆ, ಕೂಲಿ ಕಾರ್ಮಿಕರ ಜೊತೆಗೆ ಬೆಳೆದು ಬಂದಿರುವ ವ್ಯಕ್ತಿ. ಇವರ ಸೇವಗಾಗಿ ನಾನು ಸದಾ ಸಿದ್ಧನಿದ್ದೇನೆ. ಈ ಕ್ಷೇತ್ರದಲ್ಲಿ ನಾನು ಆನಂದ್ ಸಿಂಗ್ ಅವರನ್ನು ಸೋಲಿಸುತ್ತೇನೆ. ನನಗೆ ಜನತೆಯ ಬೆಂಬಲವಿದೆ. ಅವರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಹಣ, ಆಸ್ತಿಯನ್ನು ಮಾಡಿಕೊಂಡವರು ಇದ್ದಾರೆ. ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ದ್ವೇಷದ ರಾಜಕಾರಣ ಏಕೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.