ವಿಜಯಪುರ:ಹೊಸ ವರ್ಷದ ದಿನದಂದು ಕ್ಷುಲ್ಲಕ ಕಾರಣಕ್ಕೆ ಡಾಬಾ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸಂತೋಷ ಪಾಡುರಂಗ ಬಜಬಳೆ, ಸಂದೀಪ ಯಡವೆ ಹಾಗೂ ದಶರಥ ಯಡವೆ ಎಂದು ಗುರುತಿಸಲಾಗಿದೆ.

ವಿಜಯಪುರ ತಾಲ್ಲೂಕಿನ ತಿಕೋಟಾ ಹೊರವಲಯದ ರತ್ನಾಪೂರ ಕ್ರಾಸ್ ಬಳಿಯಿರುವ ಡಾಬಾದ ಮಾಲೀಕ ಮಹಾದೇವಪ್ಪ ಕೌಲಗಿ ಎಂಬಾತನನ್ನು ಮೂವರು ಆರೋಪಿಗಳು ಹತ್ಯೆಗೈದು ಪರಾರಿಯಾಗಿದ್ದರು.
ನಮ್ಮೂರಿನಲ್ಲಿ ಡಾಬಾ ಇಟ್ಟು, ನಮ್ಮ ಹತ್ತಿರ ದುಡ್ಡು ಇಸ್ಕೊಂತೀಯಾ ಎಂದು ಮಹಾದೇವಪ್ಪನ್ನು ಆರೋಪಿಗಳು ಹತ್ಯೆಗೈದಿದ್ದರು. ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.