ಕರ್ನಾಟಕ

karnataka

ETV Bharat / state

ಕೂಲಿ ಕಾರ್ಮಿಕ ದಂಪತಿಯ ಬರ್ಬರ ಕೊಲೆ - ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುದ್ನಾಳ ಗ್ರಾಮ

murder-of-a-mercenary-couple-in-muddebihala
ಕೂಲಿ ಕಾರ್ಮಿಕ ದಂಪತಿಯ ಬರ್ಬರ ಕೊಲೆ

By

Published : Nov 17, 2020, 3:15 PM IST

Updated : Nov 17, 2020, 4:21 PM IST

14:57 November 17

ಹರಿತವಾದ ಮಾರಕಾಸ್ತ್ರಗಳನ್ನ ಬಳಸಿ ಅಪರಿಚಿತರಿಂದ ಕೊಲೆ

ಮುದ್ದೇಬಿಹಾಳ: ಕೂಲಿ ಕಾರ್ಮಿಕ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮುದ್ನಾಳ ಗ್ರಾಮದಲ್ಲಿ ನಡೆದಿದ್ದು, ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದೆ.  

ನ.15 ರಂದು ಈ ಘಟನೆ ನಡೆದಿದ್ದು, ನ.16 ರ ರಾತ್ರಿ ಬೆಳಕಿಗೆ ಬಂದಿದೆ. ಹುಣಸಗಿ ತಾಲೂಕಿನ ಬಸರಿಗಿಡ ತಾಂಡಾದ ಶಾಂತಿಲಾಲ್ ದೇವಲಪ್ಪ ರಾಠೋಡ್​ (50) ಹಾಗೂ ಆತನ ಪತ್ನಿ ರುಕ್ಮಿಣಿ ಶಾಂತಿಲಾಲ್ ರಾಠೋಡ್​ (45) ಕೊಲೆಯಾಗಿರುವ ದುರ್ದೈವಿಗಳು.  

ಮುದ್ನಾಳ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಕಳೆದ ಒಂದು ವರ್ಷದಿಂದ ಕೂಲಿ ಕಾರ್ಮಿಕರೆಂದು ಕೆಲಸಕ್ಕಿದ್ದ ದಂಪತಿಯನ್ನು, ಯಾರೋ ಅಪರಿಚಿತರು ಹರಿತವಾದ ಮಾರಕಾಸ್ತ್ರಗಳನ್ನು ಬಳಸಿ ಕೊಲೆ ಮಾಡಿದ್ದಾರೆ. ದಂಪತಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. 

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್ಪಿ ಅನುಪಮ ಅಗರವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Last Updated : Nov 17, 2020, 4:21 PM IST

ABOUT THE AUTHOR

...view details