ವಿಜಯಪುರ:ಹುಟ್ಟ ಹಬ್ಬದ ಪಾರ್ಟಿ ನೀಡುವ ನೆಪದಲ್ಲಿ ಹೈದರ ಅಂಬರಖಾನೆ ಎಂಬ ಯುವಕನನ್ನು ಕರೆದುಕೊಂಡು ಹೋಗಿ ನಿನ್ನೆ ರಾತ್ರಿ ಕೊಲೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು 12 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಕೊಲೆಯಾದ ಹೈದರ್ ಸಹೋದರ ಬಸೀರ್ ಅಂಬರಖಾನೆ ನೀಡಿದ ದೂರಿನನ್ವಯ ಆರೋಪಿಗಳಾದ ಹೈದರಲಿ ಯಾದವಾಡ ( 19) ಹಾಗೂ ಜೀಶಾನ ಪಟೇಲ್ (21) ಎಂಬ ಆರೋಪಿಗಳನ್ನ ಜಲನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದರು.
12 ಗಂಟೆಯಲ್ಲಿ ಪ್ರಕರಣ ಬೇಧಿಸಿದ ಖಾಕಿ ಪಡೆ ಮೃತ ಹೈದರ್ ಅಂಬರಖಾನೆಯು, ಆರೋಪಿ ಹೈದರಲಿ ಯಾದವಾಡ ತಂಗಿಯ ಜೊತೆ ಸಂಪರ್ಕ ಹೊಂದಿದ್ದ. ಹೀಗಾಗಿ ಬರ್ತ್ ಡೇ ಪಾರ್ಟಿ ನೀಡುವ ನೆಪದಲ್ಲಿ, ರಾಷ್ಟೀಯ ಹೆದ್ದಾರಿ 50 ಆಲಮಟ್ಟಿ ರೋಡ್‌ಗೆ ಹೈದರನ್ನ ಕರೆಸಿಕೊಂಡು ಹೋಗಿ ಕೊಲೆ ಮಾಡಲಾಗಿದೆ. ಕೇಕ್ ತಿನ್ನುಸುತ್ತೇವೆ ಎಂದು ಆತನ ಮುಖಕ್ಕೆ ಕೇಕ್ ಹಚ್ಚಿ 4 ಜನ ಆರೋಪಿಗಳು ಸೇರಿ ಕುತ್ತಿಗೆ ,ಬುಜ ಹಾಗೂ ಬೆನ್ನಿಗೆ ಚೂರಿಯಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.
ಇನ್ನು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಲಾಗಿದ್ದು, ಜುಬೇರ್ ಹಾಗೂ ರಾಘು ಎಂಬ ಆರೋಪಿಗಳು ತಲೆ ಮರಿಸಿಕೊಂಡಿದ್ದು ಹುಡಕಾಟ ನಡೆಸಲಾಗಿದೆ. ಬಂಧಿತರು ನಗರದ ಝಂಡಾಕಟ್ಟಾ ಹಳಕೇರಿ ಗಲ್ಲಿಯವರಾಗಿದ್ದಾರೆ. ಪ್ರಕರಣದ ಆರೋಪಿಗಳನ್ನ ಪತ್ತೆ ಮಾಡಿದ ಸಿಪಿಐ ಬಸವರಾಜ್ ಮುರ್ತಿಹಾಳ ಹಾಗೂ ತಂಡಕ್ಕೆ ಎಸ್ಪಿ ಅನುಪಮ್ ಅಗರವಾಲ್ ಶ್ಲಾಘಿಸಿದರು.