ಕರ್ನಾಟಕ

karnataka

ETV Bharat / state

ಇಸ್ಪೀಟ್​ ಆಟದಲ್ಲಿ ಗೆದ್ದ ಹಣಕ್ಕಾಗಿ ನಿಡಗುಂದಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ! - Man murdered near Vijayalakshmi wine shop in Nidagundi town

ಇಸ್ಪೀಟ್ ಆಟದಲ್ಲಿ ಹಣ ಗೆದ್ದಿದ್ದ ಕಾರಣಕ್ಕೆ ನಿಡಗುಂದಿ ಪಟ್ಟಣದ ನಿವಾಸಿ ತಿಪ್ಪಣ್ಣ ಗೊಂದಳಿ ಎಂಬಾತನ ಕೊಲೆ ಆಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

murder-in-vijayapura-for-money-won-in-the-game-of-ispit
ಇಸ್ಪಿಟ್​ ಆಟದಲ್ಲಿ ಗೆದ್ದ ಹಣಕ್ಕಾಗಿ ನಡೆಯಿತು ಕೊಲೆ.

By

Published : Nov 16, 2020, 9:29 AM IST

ವಿಜಯಪುರ: ಕಲ್ಲಿನಿಂದ ಜಜ್ಜಿ ವ್ಯಕ್ತಿವೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಿಡಗುಂದಿ ಪಟ್ಟಣದ ವಿಜಯಲಕ್ಷ್ಮಿ ವೈನ್ ಶಾಪ್ ಬಳಿ ನಡೆದಿದೆ.

ತಿಪ್ಪಣ್ಣ ಗೊಂದಳಿ (36) ಕೊಲೆಗೀಡಾಗಿರುವ ವ್ಯಕ್ತಿ. ನಿಡಗುಂದಿ ಪಟ್ಟಣದ ನಿವಾಸಿ ತಿಪ್ಪಣ್ಣ ನಿನ್ನೆ ರಾತ್ರಿ ಇಸ್ಪೀಟ್ ಆಟದಲ್ಲಿ ಹಣ ಗೆದ್ದಿದ್ದ ಎನ್ನಲಾಗ್ತಿದೆ. ಅದೇ ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details