ವಿಜಯಪುರ:ಹೊಸ ವರ್ಷದ ಆಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ತಲವಾರ್ನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಡಿಸಿ ಕಚೇರಿ ಬಳಿಯ ಡಿಡಿಪಿಐ ಕಚೇರಿ ಬಳಿ ರಾತ್ರಿ ನಡೆದಿದೆ.
ಯುವಕ ಗಾಯಗೊಂಡಿದ್ದು, ಆತನನ್ನು ವಸೀಂ ಲೋಣಿ (30) ಎಂದು ಗುರುತಿಸಲಾಗಿದೆ. ಇಸ್ಮಾಯಿಲ್ ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಹೊಸ ವರ್ಷಾಚರಣೆ ವೇಳೆ ಗುಮ್ಮಟನಗರಿಯಲ್ಲಿ ಚೆಲ್ಲಿದ ರಕ್ತ ಇದನ್ನೂ ಓದಿ:ಹೊಸ ವರ್ಷದ ಸಂಭ್ರಮ: ಮೂಲ್ಕಿಯ ಚಿತ್ರಾಪು ರೆಸಾರ್ಟ್ ಬಳಿ ಬಂದ ವ್ಯಕ್ತಿ ಹೊಳೆ ಪಾಲು
ಹಳೇ ದ್ವೇಷದ ಹಿನ್ನೆಲೆಯಲ್ಲಿ, ಹೊಸ ವರ್ಷಾಚರಣೆ ವೇಳೆ ಮಾತಿನ ಚಕಮಕಿ ನಡೆದು, ವಸೀಂ ಮೇಲೆ ಇಸ್ಮಾಯಿಲ್ ತಲವಾರ್ನಿಂದ ಹಲ್ಲೆ ನಡೆಸಿದ್ದಾನೆ. ಸದ್ಯಕ್ಕೆ ಗಾಯಾಳು ವಸೀಂನನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೋಲಗುಮ್ಮಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.