ಮುದ್ದೇಬಿಹಾಳ: ವಸತಿ ಶಾಲೆಯೊಂದರ ಕೊಳಚೆ ನೀರಿನಿಂದ ನಿವಾಸಿಗಳಿಗೆ ತೊಂದರೆಯಾಗಿರುವ ಕುರಿತು ಈಟಿವಿ ಭಾರತದಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತು ವಾರ್ಡ್ ಸದಸ್ಯೆ ಸೇರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯಾನಗರ ಬಡಾವಣೆ ನಿವಾಸಿಗಳ ಅಹವಾಲುಗಳಿಗೆ ಆಲಿಸಿದ್ದಾರೆ.
ಪಟ್ಟಣದ ವಿದ್ಯಾನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಹಿಂಭಾಗದಲ್ಲಿ ವಸತಿ ಶಾಲೆಯೊಂದರಿಂದ ಕೊಳಚೆ ನೀರು ಹರಿಯ ಬಿಡಲಾಗಿತ್ತು. ಅಲ್ಲದೇ ಸರ್ವೀಸ್ ಚೇಂಬರ್ ತುಂಬಿ ಹರಿದು ದುರ್ವಾಸನೆ ಹರಡಿತ್ತು. ಸಾಕಷ್ಟು ಬಾರಿ ಈ ಕುರಿತು ಸಂಬಂಧಿಸಿದವರಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜವಾಗಿರಲಿಲ್ಲ.
ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ವಾರ್ಡ್ ಸದಸ್ಯೆ ಸಹನಾ ಬಡಿಗೇರ, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಹವಾಲು ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಾರ್ಡ್ ನಿವಾಸಿಗಳು ಸೊಳ್ಳೆಗಳ ಕಾಟಕ್ಕೆ ಬೇಸತ್ತು ನಿತ್ಯವೂ ನಮ್ಮ ಜೀವನ ನಡೆಸುವುದೇ ಕಷ್ಟಕರವಾಗಿತ್ತು.