ಕರ್ನಾಟಕ

karnataka

ETV Bharat / state

ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್‌ಗೆ ಗುಮ್ಮಟನಗರಿಯ ಬಹುಮುಖ ಪ್ರತಿಭೆ ಆಯ್ಕೆ

ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದ ಗುಮ್ಮಟನಗರಿಯ ಬಹುಮುಖ ಪ್ರತಿಭೆ 2023ರ ಈಜಿಪ್ಟ್‌​ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವೇಟ್ ಲಿಪ್ಟಿಂಗ್ ಚಾಂಪಿಯನ್​ಶಿಪ್‌ಗೆ ಆಯ್ಕೆಯಾಗಿದ್ದಾರೆ.

multitalented Sachin Tukaram Salunke
ಬಹುಮುಖ ಪ್ರತಿಭೆ ಸಚಿನ ತುಕಾರಾಮ ಸಾಳುಂಕೆ

By

Published : Dec 27, 2022, 10:37 PM IST

ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್‌ಗೆ ಗುಮ್ಮಟನಗರಿಯ ಬಹುಮುಖ ಪ್ರತಿಭೆ ಆಯ್ಕೆ

ವಿಜಯಪುರ :ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಜೀವನದಲ್ಲಿ ಶ್ರದ್ಧೆಯಿಂದ ಯಾವುದಾದರೂ ಕಾರ್ಯ ಕೈಗೊಂಡರೆ ಅದರಲ್ಲಿ ಗೆಲುವು ನಿಶ್ಚಿತ ಎನ್ನುವುದಕ್ಕೆ ಐತಿಹಾಸಿಕ ಗುಮ್ಮಟನಗರಿಯ ತವರೂರು ವಿಜಯಪುರ ಜಿಲ್ಲೆಯ ಯುವಕನೇ ಸಾಕ್ಷಿ. ಬಬಲೇಶ್ವರ ತಾಲೂಕಿನ ಚಿಕ್ಕ ಗ್ರಾಮ ತಿಗಣಿ ಬಿದರಿಯ ಸಚಿನ ತುಕಾರಾಮ ಸಾಳುಂಕೆ ಎಂಬ ಯುವಕ ಇದಕ್ಕೆ ತಾಜಾ ಉದಾಹರಣೆ.

ಈ ಯುವಕ ವೇಟ್ ಲಿಪ್ಟಿಂಗ್, ಹ್ಯಾಮರ್ ಥ್ರೋ, ಕುಸ್ತಿ, ಕಬಡ್ಡಿ, ಪವರ್ ಲಿಪ್ಟಿಂಗ್ ಸೇರಿದಂತೆ ಹಲವು ಕ್ರೀಡೆಯಲ್ಲಿ ಜಿಲ್ಲೆ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಹತ್ತು ಹಲವು ಪ್ರಶಸ್ತಿ ಬಾಚಿಕೊಂಡಿದ್ದಾರೆ. 2023ರ ಮಾರ್ಚ್ 11ರಂದು ಈಜಿಪ್ಟ್‌ ದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವೇಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಇದಕ್ಕಾಗಿ ಕಳೆದ ಹಲವು ತಿಂಗಳಿಂದ ಸತತ ಅಭ್ಯಾಸದಲ್ಲಿ ತೊಡಗಿದ್ದಾರೆ. 2022ರ ನವೆಂಬರ್‌ನಲ್ಲಿ ದೆಹಲಿಯಲ್ಲಿ‌ ನಡೆದ ರಾಷ್ಟ್ರೀಯ ಪವರ್ ಲಿಪ್ಟಿಂಗ್​ನಲ್ಲಿ ಎರಡು ಬೆಳ್ಳಿ ಪದಕ ಗಳಿಸಿದ್ದರು.

ABOUT THE AUTHOR

...view details