ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಬಸರಕೋಡದ ಹುತಾತ್ಮ ಯೋಧ ಶಿವಾನಂದ ಬಡಿಗೇರ ಅವರ ಮನೆಗೆ ಬುಧವಾರ ಜಿ.ಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಭೇಟಿ ನೀಡಿ, ಯೋಧನ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮುದ್ದೇಬಿಹಾಳ: ಹುತಾತ್ಮ ಯೋಧನ ಮನೆಗೆ ಜಿಪಂ ಅಧ್ಯಕ್ಷೆ ಭೇಟಿ - Martyr Soldier's Home
ಹುತಾತ್ಮ ಯೋಧ ಶಿವಾನಂದ ಬಡಿಗೇರ ಅವರ ಮನೆಗೆ ಬುಧವಾರ ಜಿ.ಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
![ಮುದ್ದೇಬಿಹಾಳ: ಹುತಾತ್ಮ ಯೋಧನ ಮನೆಗೆ ಜಿಪಂ ಅಧ್ಯಕ್ಷೆ ಭೇಟಿ ಹುತಾತ್ಮ ಯೋಧನ ಮನೆಗೆ ಜಿಪಂ ಅಧ್ಯಕ್ಷೆ ಭೇಟಿ](https://etvbharatimages.akamaized.net/etvbharat/prod-images/768-512-8656765-thumbnail-3x2-bdcopy.jpg)
ಹುತಾತ್ಮ ಯೋಧನ ಮನೆಗೆ ಜಿಪಂ ಅಧ್ಯಕ್ಷೆ ಭೇಟಿ
ಪಾರ್ಥೀವ ಶರೀರ ಆಗಮನಕ್ಕೂ ಮುನ್ನಾ ಯೋಧನ ಮನೆಗೆ ಭೇಟಿ ನೀಡಿದ ಜಿಪಂ ಅಧ್ಯಕ್ಷೆ ಕಳ್ಳಿಮನಿ ಅವರು ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು. ಅಲ್ಲದೇ ಯೋಧನ ತಂದೆ, ತಾಯಿ, ಪತ್ನಿ, ಸಹೋದರರಿಗೆ ಸಾಂತ್ವನ ಹೇಳಿದರು. ಈ ವೇಳೆ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಮಾಜ ಸೇವಕ ಡಾ.ಬಸವರಾಜ ಅಸ್ಕಿ, ನಾಗರಾಜ ತಂಗಡಗಿ ಮತ್ತಿತರರು ಇದ್ದರು.
ಹುತಾತ್ಮ ಯೋಧನ ಮನೆಗೆ ಜಿಪಂ ಅಧ್ಯಕ್ಷೆ ಭೇಟಿ
ಇದೇ ವೇಳೆ ಯೋಧನ ಕುರಿತು ಮಾತನಾಡಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಯೋಧ ಶಿವಾನಂದನ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದವರ ಜೊತೆಗೆ ನಾವಿದ್ದೇವೆ ಎಂದು ಹೇಳಿದರು.
Last Updated : Sep 3, 2020, 8:44 AM IST