ಕರ್ನಾಟಕ

karnataka

ETV Bharat / state

ಎಟಿಎಂ ಕಳ್ಳತನ ಯತ್ನ ವಿಫಲ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಯೂನಿಯನ್ ಬ್ಯಾಂಕ್ ಎಟಿಎಂ

ಮುದ್ದೇಬಿಹಾಳ ಪಟ್ಟಣದ ಬ್ಯಾಂಕ್ ಎಟಿಎಂನಲ್ಲಿ ಕಳ್ಳತನ ಎಸಗಲು ಮುಂದಾದ ಖದೀಮರಿಗೆ ನಿರಾಸೆಯುಂಟಾಗಿದೆ. ಇನ್ನು ಇವರ ವಿಫಲ ಯತ್ನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸರಿಂದ ತನಿಖೆ

By

Published : Aug 26, 2020, 3:16 PM IST

Updated : Aug 26, 2020, 4:08 PM IST

ಮುದ್ದೇಬಿಹಾಳ: ಪಟ್ಟಣದ ತಂಗಡಗಿ ರಸ್ತೆಯ ಬ್ಯಾಂಕ್ ಆವರಣದಲ್ಲಿ ತಡರಾತ್ರಿ ನಡೆದಿರುವ ವಿಫಲ ಕಳ್ಳತನ ಯತ್ನದ ಕುರಿತು ಮಹತ್ವದ ಸಾಕ್ಷ್ಯವೊಂದು ಪೊಲೀಸರಿಗೆ ಲಭ್ಯವಾಗಿದೆ.

ಮುದ್ದೇಬಿಹಾಳ ಪಟ್ಟಣದ ಬ್ಯಾಂಕ್ ಎಟಿಎಂಗೆ ನುಗ್ಗಿರುವ ದರೋಡೆಕೋರರು ಎಟಿಎಂನಲ್ಲಿದ್ದ ಸಿಸಿ ಕ್ಯಾಮರಾ ವೈರ್ ಕತ್ತರಿಸಿದ್ದಾರೆ. ನಂತರ ಎಟಿಎಂ ಒಡೆಯಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್​ ಆಗಿದ್ದಾರೆ.

ಇದಕ್ಕೂ ಮುನ್ನ 12.50-1.00ಗಂಟೆಯ ಸಮಯದಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದಿರುವ ಕಳ್ಳರು ಎಟಿಎಂ ದರೋಡೆಗೆ ಸಂಚು ರೂಪಿಸಿರುವ ಮಾಹಿತಿ ಲಭ್ಯವಾಗಿತ್ತು. ಈ ಬಗ್ಗೆ ಸಿಂಡಿಕೇಟ್ ಬ್ಯಾಂಕ್​ನನ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದಾಗ ಸ್ಕೂಟಿಯಲ್ಲಿ ಬರುವ ಕಳ್ಳರು ಎಟಿಎಂನತ್ತ ಹೋಗುವ ಚಲನವಲನ ದಾಖಲಾಗಿದೆ.

ಬ್ಯಾಂಕ್​ಗೆ ಭೇಟಿ ನೀಡಿದ ಡಿವೈಎಸ್ಪಿ ಇ.ಶಾಂತವೀರ, ಘಟನೆಯ ಕುರಿತು ಮಾತನಾಡಿದ್ದು, ಇದು ವೃತ್ತಿಪರ ಕಳ್ಳರು ಮಾಡಿದ ಪ್ರಕರಣವಲ್ಲ. ಹಣಕ್ಕಾಗಿ ಸ್ಥಳೀಯರು ಮಾಡಿರುವ ಕೆಲಸ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

Last Updated : Aug 26, 2020, 4:08 PM IST

ABOUT THE AUTHOR

...view details