ವಿಜಯಪುರ:ಮುದ್ದೇಬಿಹಾಳ ಪಟ್ಟಣದಲ್ಲಿ ರಸ್ತೆ ಅತಿಕ್ರಮಣ ಮಾಡಿ ಕಟ್ಟಲಾಗಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆ ಪುರಸಭೆ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಡೆಸಲಾಯಿತು.
ಮುದ್ದೇಬಿಹಾಳ ರಸ್ತೆ ತೆರವು ಕಾರ್ಯಾಚರಣೆ... ಪುರಸಭೆ ವಿರುದ್ಧ ವ್ಯಾಪಾರಿಗಳ ಆಕ್ರೋಶ - ಮುದ್ದೇಬಿಹಾಳ ರಸ್ತೆ ತೆರವು ಕಾರ್ಯಾಚರಣೆ ಸುದ್ದಿ
ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಪುರಸಭೆ ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ರಸ್ತೆಯನ್ನು ಅತಿಕ್ರಮಣ ಮಾಡಿ ಕಟ್ಟಲಾಗಿದ್ದ ಕಟ್ಟಡ ಮತ್ತು ಪುಟ್ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ಈ ಸಂದರ್ಭದಲ್ಲಿ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಮುದ್ದೇಬಿಹಾಳ ರಸ್ತೆ ತೆರವು ಕಾರ್ಯಾಚರಣೆ
ಮುಖ್ಯರಸ್ತೆಯಲ್ಲಿದ್ದ ಹಾಗೂ ಬಸ್ ನಿಲ್ದಾಣದ ಮುಂದಿನ ಡಬ್ಬಾ ಹಾಗೂ ತಳ್ಳುಗಾಡಿಗಳ ತೆರವು ಮಾಡಲಾಯಿತು. ಫುಟ್ ಪಾತ್ ತೆರವಿಗೆ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದು ಯಾವುದೇ ನೋಟೀಸ್ ನೀಡದೆ ಏಕಾಏಕಿ ಅಂಗಡಿ ತೆರವುಗೊಳಿಸಿದರೆ ನಾವು ಎಲ್ಲಿ ಹೋಗಬೇಕೆಂದು ವ್ಯಾಪಾರಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪರ್ಯಾಯ ಜಾಗ ಒದಗಿಸುವಂತೆ ಪುರಸಭೆ ಅಧಿಕಾರಿಗಳಿಗೆ ಆಗ್ರಹಿಸಿದರು.