ಮುದ್ದೇಬಿಹಾಳ: ಕೊರೊನಾ ವೈರಸ್ ವಿರುದ್ಧ ಸಮರ ಸಾರಿರುವ ಸರ್ಕಾರದ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಬಡವರಿಗೆ ರೇಷನ್ ವಿತರಿಸುವ ಕಾರ್ಯವನ್ನು ತಾಲೂಕಿನ ನಾಲತವಡಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಶಾಖೆಯಲ್ಲಿ ಮಾಡಲಾಯಿತು.
ಕೊರೊನಾ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡೋಣ. ಸಾಮಾಜಿಕ ಅಂತರ ಪಾಲಿಸೋಣ. ಮಾಸ್ಕ್, ಸ್ಯಾನಿಟೈಸರ್ ಬಳಸೋಣ ಎಂಬಿತ್ಯಾದಿ ಘೋಷ ವಾಕ್ಯಗಳನ್ನು ಬರೆದ ನಾಮಫಲಕಗಳು, ಪ್ರತಿ ಮೂರು ಅಡಿ ದೂರದಲ್ಲಿ ಸುಣ್ಣದ ಗೆರೆಯ ಬಾಕ್ಸ್ ಹಾಕಿ ಅಲ್ಲಿ ಒಬ್ಬೊಬ್ಬರಾಗಿ ಪಡಿತರ ಪಡೆದುಕೊಳ್ಳಲು ಬರುವ ವ್ಯವಸ್ಥೆ ಮಾಡಲಾಗಿತ್ತು.