ಮುದ್ದೇಬಿಹಾಳ :ತಾಲೂಕಿನ ಇಂಡಿಯನ್ ಮಿಷನರಿ ಸೊಸೈಟಿಯ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡಲಾಯಿತು. ಕೊರೊನಾ ನಿರ್ಮೂಲನೆಗಾಗಿ ಫಾದರ್ ಪ್ರಾರ್ಥಿಸಿದರು.
ಕೊರೊನಾ ನಿರ್ಮೂಲನೆಗೆ ಮುದ್ದೇಬಿಹಾಳದ ಚರ್ಚ್ನಲ್ಲಿ ಪ್ರಾರ್ಥನೆ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಕುಂಟೋಜಿ ರಸ್ತೆಯಲ್ಲಿರುವ ರೋಮನ್ ಕ್ಯಾಥೊಲಿಕ್ ಹಾಗೂ ಪ್ರೊಟೆಸ್ಟೆಂಟ್ ಸಮುದಾಯದ ಚರ್ಚ್ನ ಲೈಟಿಂಗ್‌ನಿಂದ ಅಲಂಕಾರಗೊಳಿಸಿ, ಯೇಸುವಿನ ವಿವಿಧ ಮೂರ್ತಿಗಳನ್ನು ರಚಿಸಲಾಗಿತ್ತು.
ಚರ್ಚ್ಗೆ ಕ್ರೈಸ್ತ ಬಾಂಧವರು ತೆರಳಿ ಕೊರೊನಾ ಸೋಂಕು ನಿವಾರಣೆಗೆ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಕ್ಕಳು, ಯುವಕ-ಯುವತಿಯರು ಯೇಸು ಆಧಾರಿತ ನೃತ್ಯ ಹಾಗೂ ನಾಟಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ವೇಳೆ ಕ್ರೈಸ್ತ ದೇವ ಸೇವಕರಾದ ಜೇಸುದಾಸ್, ಚರ್ಚ್ ಅಧ್ಯಕ್ಷೆ ಮೆರಿಯಮ್ಮ, ಯೇಸು ಭಕ್ತರಾದ ಜಬಸ್, ಅನುಸೂಯಾ ನವಲಿ, ಮಂಜುನಾಥ ಕೊಪ್ಪ, ಎನ್ ಬಿ ಪಿಂಜಾರ, ಶ್ರೀಶೈಲ್ ಹಡಪದ, ಗುಂಡಪ್ಪ, ಮಂಜು ಮಾದರ, ನೆಹೆಮೀಯಾ, ಕಾಂತಮ್ಮ ದೇವರಹುಲಗಬಾಳ, ಲಕ್ಷ್ಮಿಬಾಯಿ ಮೂಕಿಹಾಳ, ಬೋರಮ್ಮ ಹುಲಗಬಾಳ, ಮಂಜುನಾಥ್ ದೇವಡಗಿ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು.