ಮುದ್ದೇಬಿಹಾಳ: ಮುಂಬೈನ ಭಾರತೀಯ ನೌಕಾದಳ (ಇಂಡಿಯನ್ ನೇವಿ) ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಕುಂಟೋಜಿ ಗ್ರಾಮದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸುರಾಜಗುರು ಅಶೋಕ ಹೂಗಾರ (25) ಹೃದಯಾಘಾತದಿಂದ ನಿಧನರಾದವರು.
ನೌಕಾದಳದಲ್ಲಿದ್ದ ಮುದ್ದೇಬಿಹಾಳ ಮೂಲದ ವ್ಯಕ್ತಿ ಹೃದಯಾಘಾತದಿಂದ ನಿಧನ - ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮ
ನಾಲ್ಕೂವರೆ ವರ್ಷದ ಹಿಂದೆ ವಿಶಾಖಪಟ್ಟಣಂ ನೌಕಾದಳದಲ್ಲಿ ಸೇವೆಗೆ ಸೇರ್ಪಡೆಯಾಗಿದ್ದ ಬಸುರಾಜಗುರು ಅಶೋಕ ಹೂಗಾರ, ಕಳೆದ ಆರು ತಿಂಗಳ ಹಿಂದಷ್ಟೆ ಮುಂಬೈಗೆ ವರ್ಗಾವಣೆಯಾಗಿದ್ದರು. ಹೈಜೆನಿಕ್ ಡಿಪಾರ್ಟ್ಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
![ನೌಕಾದಳದಲ್ಲಿದ್ದ ಮುದ್ದೇಬಿಹಾಳ ಮೂಲದ ವ್ಯಕ್ತಿ ಹೃದಯಾಘಾತದಿಂದ ನಿಧನ Muddebihala man dies while working in Indian Navy](https://etvbharatimages.akamaized.net/etvbharat/prod-images/768-512-12178750-275-12178750-1624010264202.jpg)
ಬಸುರಾಜಗುರು ಅಶೋಕ ಹೂಗಾರ (25)
ಓದಿ: ಲಾಕ್ಡೌನ್ ಎಫೆಕ್ಟ್.. ರಸ್ತೆಗಳೇ ಈಗ ವನ್ಯಜೀವಿ ಸಫಾರಿ ತಾಣ.. ನಿತ್ಯ ಕಾಡುಪ್ರಾಣಿಗಳ ದರ್ಶನ..
ಮೃತರಿಗೆ ತಾಯಿ, ಓರ್ವ ಸಹೋದರಿ ಇದ್ದು, ಕಳೆದ ತಿಂಗಳಷ್ಟೇ ರಜೆಯ ಮೇಲೆ ಊರಿಗೆ ಬಂದಿದ್ದರು. ನಾಲ್ಕುವರೆ ವರ್ಷದ ಹಿಂದೆ ವಿಶಾಖಪಟ್ಟಣಂ ನೌಕಾದಳದಲ್ಲಿ ಸೇವೆಗೆ ಸೇರ್ಪಡೆಯಾಗಿದ್ದ ಅವರು ಕಳೆದ ಆರು ತಿಂಗಳ ಹಿಂದಷ್ಟೆ ಮುಂಬೈಗೆ ವರ್ಗಾವಣೆಯಾಗಿದ್ದರು. ಹೈಜೆನಿಕ್ ಡಿಪಾರ್ಟ್ಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತದೇಹ ಜೂ.19 ರಂದು ಸ್ವಗ್ರಾಮಕ್ಕೆ ಆಗಮಿಸಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated : Jun 18, 2021, 4:35 PM IST