ಕರ್ನಾಟಕ

karnataka

ETV Bharat / state

ಅವ್ಯವಸ್ಥೆಯ ಆಗರವಾದ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ: ಮೂಲ ಸೌಕರ್ಯಗಳಿಲ್ಲದೇ ರೋಗಿಗಳ ಪರದಾಟ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಮೂಲ ಸೌಕರ್ಯಗಳಿಲ್ಲದೇ ರೋಗಿಗಳು ಕೈ ಕೈ ಹಿಸುಕಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.

muddebihala-government-hospital
ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ

By

Published : Mar 18, 2021, 9:57 PM IST

ಮುದ್ದೇಬಿಹಾಳ: ನಗರದ ನೂರು ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೌಲಭ್ಯಗಳ ಕೊರತೆಯಿಂದ ಸೊರಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ

ಆಸ್ಪತ್ರೆಯಲ್ಲಿ ಹೇಳಲಾಗುತ್ತಿದ್ದರೂ ವೈದ್ಯರು, ಸಿಬ್ಬಂದಿ ಕೊರತೆ ಹೇಳತೀರದಷ್ಟಿದೆ. ಮಂಜೂರಾತಿ ಇರುವ 11 ವೈದ್ಯರಲ್ಲಿ ಹನ್ನೊಂದು ವೈದ್ಯರ ಹುದ್ದೆಗಳು ಖಾಲಿ ಇದ್ದು, ಕಡ್ಡಾಯ ಸೇವೆಯ ಆಧಾರದಲ್ಲಿ ಮೂವರು ಸೇವೆ ಸಲ್ಲಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯೂ ಇರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಕಷ್ಟ ಹೇಳತೀರಾಗಿದೆ. ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ಸದ್ಯಕ್ಕೆ ವಿಜಯಪುರ ಮೂಲದ ವೈದ್ಯರು ತಿಂಗಳಲ್ಲಿ ಎರಡು ಬಾರಿ ಮುದ್ದೇಬಿಹಾಳಕ್ಕೆ ಬಂದು ಮಾಡಿ ಹೋಗುತ್ತಿದ್ದಾರೆ.

ಆದರೆ ಈ ಶಸ್ತ್ರಚಿಕಿತ್ಸೆ ಮಾಡುವಾಗ ಸ್ಥಳೀಯ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಳ್ಳಲು ಬರುವ ಮಹಿಳೆಯರಿಗೆ ಸೂಕ್ತ ಸೌಕರ್ಯಗಳ ಕೊರತೆ ಇಲ್ಲ ಎಂಬುದು ಈಚೇಗೆ ನಡೆದ ಆಪರೇಷನ್ ಕ್ಯಾಂಪ್ ವೇಳೆ ಬಹಿರಂಗವಾಗಿದೆ. ಸ್ಥಿತಿವಂತರು, ಪ್ರಭಾವಿಗಳ ಶಿಫಾರಸು ತೆಗೆದುಕೊಂಡು ಹೋದರೆ ಒಳ್ಳೆಯ ಸೌಲಭ್ಯ ಕೊಡುತ್ತಾರೆ. ವಿಶೇಷ ಕೊಠಡಿಯಲ್ಲಿ ಆಪರೇಷನ್ ಮಾಡಿ ಉಪಚರಿಸುತ್ತಾರೆ. ಆದರೆ ಸಾಮಾನ್ಯರು, ಬಡವರು, ಅನಕ್ಷರಸ್ಥರು ಬಂದರೆ ಅವರನ್ನು ನೆಲದ ಮೇಲೆ ಅದು ವರ್ಷಗಟ್ಟಲೇ ಹಳೆಯದಾದ ಬೆಡ್​ ಮೇಲೆ ಮಲಗಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ABOUT THE AUTHOR

...view details