ಮುದ್ದೇಬಿಹಾಳ:ಸೊಳ್ಳೆಗಳನ್ನು ಓಡಿಸಲೆಂದು ಹಚ್ಚುವ ಗುಡ್‌ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ತೀವ್ರ ಅಸ್ವಸ್ಥಗೊಂಡ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.
ಆಜಾದ್ ನಗರದ ನಿವಾಸಿ ಮಹ್ಮದ್ ಆಸೀಫ್ ಕವಡಿಮಟ್ಟಿ ಅವರ ಎರಡು ವರ್ಷದ ಪುತ್ರ ಅರಹಾನ್ ಕವಡಿಮಟ್ಟಿಯೇ ಮನೆಯಲ್ಲಿದ್ದ ಗುಡ್‌ನೈಟ್ ಲಿಕ್ವಿಡ್ ಕುಡಿದು ಅಸ್ವಸ್ಥಗೊಂಡ ಬಾಲಕ. ಮನೆಯ ಹಾಲ್‌ನಲ್ಲಿ ಸೊಳ್ಳೆ ಓಡಿಸಲೆಂದು ಹಚ್ಚಿದ್ದ ಗುಡ್‌ನೈಟ್ ಲಿಕ್ವಿಡ್ ಅನ್ನು ಕಿತ್ತು ಅದನ್ನು ಒಡೆದು ಬಾಯಿಗೆ ಹಾಕಿಕೊಂಡಿದ್ದಾನೆ. ಬಳಿಕ ಏಕಾಏಕಿ ಕೆಮ್ಮುವುದಕ್ಕೆ ಶುರು ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಪಾಲಕರು ಕೂಡಲೇ 108 ಆರೋಗ್ಯ ಕವಚ ಅಂಬ್ಯುಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಆಗ ವೈದ್ಯರು ತಾಳಿಕೋಟಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ತಡ ಮಾಡದೇ ಆಂಬ್ಯುಲೆನ್ಸ್ನಲ್ಲಿಯೇ ಮಗುವಿಗೆ ಚಿಕಿತ್ಸೆ ನೀಡುತ್ತಾ ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.