ಮುದ್ದೇಬಿಹಾಳ: ಕೊರೊನಾ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಆಹಾರ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಗುಣಮುಖರಾಗಿ ಕ್ಷೇತ್ರಕ್ಕೆ ಶುಕ್ರವಾರ ಮರಳಿದರು.
ಕೊರೊನಾದಿಂದ ಶಾಸಕ ನಡಹಳ್ಳಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ - ಶಾಸಕ ನಡಹಳ್ಳಿ
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು ಕ್ಷೇತ್ರಕ್ಕೆ ಮರಳಿದ್ದಾರೆ.
![ಕೊರೊನಾದಿಂದ ಶಾಸಕ ನಡಹಳ್ಳಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ mla nadahalli](https://etvbharatimages.akamaized.net/etvbharat/prod-images/768-512-11670288-thumbnail-3x2-net.jpg)
ಶಾಸಕ ನಡಹಳ್ಳಿ
ಈ ಕುರಿತು ಅಧಿಕೃತವಾಗಿ ತಮ್ಮ ಫೇಸ್‌ಬುಕ್ ಪೇಜ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ತಮ್ಮ ಆರೋಗ್ಯಕ್ಕೆ ಪ್ರಾರ್ಥಿಸಿದ ಕ್ಷೇತ್ರದ ಮತದಾರರು, ಅಭಿಮಾನಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್ನಲ್ಲಿ ಇರಲಿದ್ದು, ಸಾರ್ವಜನಿಕರ ಭೇಟಿ ಸದ್ಯಕ್ಕೆ ಇರುವುದಿಲ್ಲ ಎಂದು ಅವರ ಆಪ್ತ ಸಹಾಯಕ ಬಾಬುರಾವ್ ಕುಲಕರ್ಣಿ ತಿಳಿಸಿದ್ದಾರೆ.