ಕರ್ನಾಟಕ

karnataka

ETV Bharat / state

'ಊರಿಗೆ ಬಂದರೆ ಕಡಿದು ಹೆಡಿಗೆ ತುಂಬ್ತೀವಿ..': ಅಧಿಕಾರಿ ಎದುರು ರೈತನ ಆಕ್ರೋಶ - Farmer outrage against officer

ಅರಸನಾಳ ಗ್ರಾಮದ ಹತ್ತಿರ ಕಾಲುವೆ ಕಾಮಗಾರಿ ಕೆಲಸ ಸ್ಥಗಿತಗೊಂಡು 10 ವರ್ಷ ಆಗಿದೆ. ಸ್ಥಗಿತಗೊಂಡ ಕೆಲಸವನ್ನು ತ್ವರಿತಗತಿಯಲ್ಲಿ ಮುಗಿಸಿ ರೈತರಿಗೆ ಅನುಕೂಲ ಮಾಡಿಕೂಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

muddebihal
ಕೆಬಿಜೆಎನ್‌ಎಲ್ ಅಧಿಕಾರಿಗೆ ಮನವಿ

By

Published : Mar 31, 2021, 5:03 PM IST

ಮುದ್ದೇಬಿಹಾಳ/ವಿಜಯಪುರ: ಕಾಲುವೆ ಕೆಲಸಗಳು ಅರ್ಧಕ್ಕೆ ನಿಂತಿದ್ದು, ಅದರ ಬಗ್ಗೆ ಗಮನಕ್ಕೆ ತಂದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅದಕ್ಕೆ ನಮ್ಮೂರಿಗೆ ಬಂದರೆ 'ನಿಮ್ಮನ್ನು ಕಡಿದು ಹೆಡಿಗೆ ತುಂಬಿ ಕಳ್ಸ್ತೀ‌ವಿ', ಸುಮ್ನೆ ಇರುವಂತೆ ಎಚ್ಚರಿಕೆ ನೀಡಿದ್ದೇವೆ ಎಂದು ತಾಲೂಕಿನ ನಾಲತವಾಡ ಪಟ್ಟಣದ ರೈತರೊಬ್ಬರು ಕೆಬಿಜೆಎನ್‌ಎಲ್ ಅಧಿಕಾರಿಗಳ ಎದುರಿಗೆ ಆಕ್ರೋಶಭರಿತ ಮಾತುಗಳನ್ನಾಡಿದ ಘಟನೆ ಬುಧವಾರ ನಡೆದಿದೆ.

'ಊರಿಗೆ ಬಂದರೆ ಕಡಿದು ಹೆಡಿಗೆ ತುಂಬ್ತೀವಿ'.. ಅಧಿಕಾರಿ ಎದುರು ರೈತನ ಆಕ್ರೋಶದ ಹೇಳಿಕೆ

ತಾಲೂಕಿನ ನಾಲತವಾಡ ಭಾಗದ ರೈತ ಹೋರಾಟ ವೇದಿಕೆ ನೇತೃತ್ವದಲ್ಲಿ ಆ ಭಾಗದಲ್ಲಿ ಅರ್ಧಕ್ಕೆ ನಿಂತಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಯ ಡಿ-13ಎ ಕಾಮಗಾರಿಯ ಕುರಿತು ಹಾಗೂ ಸದರಿ ಕಾಲುವೆ ಅಡಿಯಲ್ಲಿ ಬರುವ ಲ್ಯಾಟರಲ್ ಮತ್ತು ಲ್ಯಾಟರಲ್ ಮೈನರ್​ಗಳು ಹಾಗೂ ಎಫ್​ಐಸಿ ಕಾಮಗಾರಿಗಳ ಕುರಿತು ಆಲಮಟ್ಟಿಯಲ್ಲಿ ಮನವಿ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯ ಅಭಿಯಂತರ ಎದುರಿಗೆ ರೈತರೊಬ್ಬರು ಹೀಗೆ ಹೇಳಿದರು.

ನಾಲತವಾಡ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯಲ್ಲಿ ಡಿ-13 ಎ ಕಾಲುವೆಯ ಕಾಮಗಾರಿಯು ಕಳೆದ 10 ವರ್ಷವಾದರೂ ಕಾಮಗಾರಿ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ. ಅರಸನಾಳ ಗ್ರಾಮದ ಹತ್ತಿರ ಕಾಲುವೆಯ ಕಾಮಗಾರಿ ಕೆಲಸ ಸ್ಥಗಿತಗೊಂಡು ದಶಕ ಕಳೆದಿದೆ. ಸ್ಥಗಿತಗೊಂಡ ಕೆಲಸವನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಿ, ಮುಗಿಸಿ ರೈತರಿಗೆ ಅನುಕೂಲ ಮಾಡಿಕೂಡಬೇಕೆಂದು ಅವರು ಒತ್ತಾಯಿಸಿದರು.

ನೀರು ಹರಿಸದ ಕಾರಣ ಮಳೆಯ ನೀರು ಕಾಲುವೆಯಲ್ಲಿ ನಿಂತು ಹೂಳು ತುಂಬಿ ಕೆಲವು ಕಾಲುವೆಗಳು ಇದ್ದೂ ಇಲ್ಲದಂತಾಗಿವೆ. ಅವುಗಳನ್ನು ಆದಷ್ಟು ಬೇಗನೆ ಸರಿಪಡಿಸಬೇಕು. ಕಾಮಗಾರಿಗಳಿಗೆ ರೈತರಿಂದ ಜಮೀನುಗಳನ್ನು ವಶಪಡಿಸಿಕೊಂಡಿದ್ದು, ಅವರಿಗೆ ಇಲ್ಲಿಯವರೆಗೆ ಭೂ ಪರಿಹಾರವನ್ನು ಕೊಟ್ಟಿರುವುದಿಲ್ಲ. ಅಲ್ಲದೇ ಆಲಮಟ್ಟಿ ಎಡದಂಡೆ ಕಾಲುವೆಯ ಕಿ.ಮೀ 69 ರಲ್ಲಿ ಔಟ್​ಲೆಟ್ ಮಾಡಿ ಎಫ್​ಐಸಿ ಕೆಲಸವನ್ನು ಮಾಡಬೇಕಾಗಿತ್ತು. ಆದರೆ ತಮ್ಮ ಇಲಾಖೆಯ ಅಧಿಕಾರಿಗಳು ಮೊದಲು ಎಫ್​​ಐಸಿ ಕೆಲಸ ಮಾಡಿ ಮುಗಿಸಿ ಮುಖ್ಯ ಕಾಲುವೆಗೆ ಸಂಪರ್ಕ ಕಲ್ಪಿಸಬೇಕಿತ್ತು. ಇದ್ಯಾವುದನ್ನೂ ಅಧಿಕಾರಿಗಳು ಮಾಡಿಲ್ಲ ಎಂದು ರೈತರು ದೂರಿದರು.

ಆದಷ್ಟು ಬೇಗ ಈ ಭಾಗದ ರೈತರಿಗೆ ಅನುಕೂಲವಾಗಬೇಕಿರುವ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಉತ್ತರಿಸಿದ ಕೆಬಿಜೆಎನ್‌ಎಲ್ ಅಧಿಕಾರಿ ಸೂಕ್ತ ಕ್ರಮದ ಭರವಸೆ ನೀಡಿದರು.

ABOUT THE AUTHOR

...view details