ವಿಜಯಪುರ:ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹರಿ ಬಿಡುತ್ತಿರುವ ಹಿನ್ನೆಲೆ, ಭೀಮಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿದ್ದ ಇಂಡಿ ತಾಲೂಕಿನ ಹಳೇ ಹಿಂಗಣಿ ಗ್ರಾಮದಲ್ಲಿ ಸಿಲುಕಿದ್ದ ತಾಯಿ-ಮಗನನ್ನು ಇಂದು ಸಂಜೆ ರಕ್ಷಣೆ ಮಾಡಲಾಗಿದೆ.
ವಿಜಯಪುರ: ನಡುಗುಡ್ಡೆಯಲ್ಲಿ ಸಿಲುಕಿದ್ದ ತಾಯಿ-ಮಗನ ರಕ್ಷಣೆ - vijayapura latest news
ನೀಲಾಬಾಯಿ ಸಂಗಣ್ಣ ಕೋಳಿ (100) ಹಾಗೂ ಶಿವಮಲ್ಲಪ್ಪ ಸಂಗಣ್ಣ ಕೋಳಿ (60) ಎಂಬುವರು ಭೀಮಾ ಪ್ರವಾಹದಿಂದ ಹಳೇ ಹಿಂಗಣಿ ಗ್ರಾಮದ ಸುತ್ತಲು ನೀರು ಆವರಿಸಿದ್ದಕ್ಕೆ, ಭಯದಿಂದ ತಮ್ಮ ಪತ್ರಾಸ್ ಶೆಡ್ ಬಳಿಯ ಗಿಡದ ಬಳಿ ಕಂಗಾಲಾಗಿ ನಿಂತಿದ್ದರು. ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ತಾಯಿ-ಮಗನನ್ನು ರಕ್ಷಣೆ ಮಾಡಿದ್ದಾರೆ.
ನೀಲಾಬಾಯಿ ಸಂಗಣ್ಣ ಕೋಳಿ (100) ಹಾಗೂ ಶಿವಮಲ್ಲಪ್ಪ ಸಂಗಣ್ಣ ಕೋಳಿ (60) ಎಂಬ ತಾಯಿ-ಮಗ ಇಬ್ಬರು ಭೀಮಾ ಪ್ರವಾಹದಿಂದ ಹಳೇ ಹಿಂಗಣಿ ಗ್ರಾಮದ ಸುತ್ತಲು ನೀರು ಆವರಿಸಿದ್ದಕ್ಕೆ, ಭಯದಿಂದ ತಮ್ಮ ಪತ್ರಾಸ್ ಶೆಡ್ ಬಳಿಯ ಗಿಡದ ಬಳಿ ಕಂಗಾಲಾಗಿ ನಿಂತಿದ್ದರು. ಈ ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ತಾಯಿ-ಮಗನನ್ನು ರಕ್ಷಣೆ ಮಾಡಿದ್ದಾರೆ.
ರಸ್ತೆ ಸಂಪರ್ಕ ಕಡಿತ: ಔರಾದ-ಸದಾಶಿವಘಡ ರಾಜ್ಯ ಹೆದ್ದಾರಿ ಮೇಲೆ ಭೀಮಾ ನದಿಯ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ದೇವಣಗಾಂವ್-ಆಲಮೇಲೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ದೇವಣಗಾಂವ್ ಸಮೀಪದ ಅಪ್ಪಾರ ಹಳ್ಳದ ಮೇಲೆ ನೀರು ಬಂದು ಜಲಾವೃತವಾದ ಪರಿಣಾಮ ಕಲಬುರಗಿ ಜಿಲ್ಲೆಯ ಸಂಪರ್ಕ ಕಡಿತಗೊಂಡಿದೆ.