ವಿಜಯಪುರ:ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾದಲ್ಲಿ ನಡೆದಿದೆ. ತಾಂಡಾ ನಿವಾಸಿ ಗೀತಾ ರಾಮು ಚೌವ್ಹಾಣ (32), ಸೃಷ್ಠಿ (6), ಸಮರ್ಥ (4) ಮತ್ತು ಕಿಶನ್ (3) ಮೃತಪಟ್ಟವರು.
ವಿಜಯಪುರ: ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ - Mother committed suicide
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಪತಿ ಜೊತೆಗಿನ ಜಗಳದ ಬಳಿಕ ಮೂರು ಮಕ್ಕಳ ಜೊತೆ ಮಹಿಳೆ ಸಾವಿಗೆ ಶರಣಾಗಿದ್ದಾರೆ.
ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
ಶನಿವಾರ ರಾತ್ರಿ ಗೀತಾ ಮತ್ತು ಅವರ ಪತಿ ರಾಮು ಮಧ್ಯೆ ಜಗಳವಾಗಿತ್ತಂತೆ. ಆ ಬಳಿಕ ಪತಿ ಮಲಗಿದ್ದ ವೇಳೆ ಮೂವರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಒಂದೇ ಕುಟುಂಬದ ಏಳು ಜನರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಸಂಬಂಧಿಕನಿಂದಲೇ ಕೊಲೆ?