ಕರ್ನಾಟಕ

karnataka

ETV Bharat / state

ಕೊರೊನಾಗೆ ತಾಯಿ, ಮಗ ಬಲಿ: ಮಗನ ಸಾವಿನ ಸುದ್ದಿ ತಿಳಿದ ಬೆನ್ನಲ್ಲೇ ಕಣ್ಮುಚ್ಚಿದ ತಾಯಿ - ಕೊರೊನಾಗೆ ತಾಯಿ, ಮಗ ಬಲಿ

ಕೊರೊನಾದಿಂದ ಬಳಲುತ್ತಿದ್ದ ತಾಯಿ-ಮಗ ಒಂದೇ ದಿನ ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ತಿಳಿದು 1 ಗಂಟೆಯಲ್ಲೇ ತಾಯಿ ಕೂಡ ಅಸುನೀಗಿದ್ದಾರೆ.

corona
corona

By

Published : May 8, 2021, 12:51 AM IST

ವಿಜಯಪುರ: ಕೊರೊನಾ ಮಹಾಮಾರಿಗೆ ಒಂದೇ ದಿನ ತಾಯಿ-ಮಗ ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ‌ ಗ್ರಾಮದಲ್ಲಿ ನಡೆದಿದೆ.

ಕೊರೊನಾ ಮಹಾಮಾರಿಗೆ ಶಿಕ್ಷಕ ಹಾಗೂ ಅವರ ತಾಯಿ ಬಲಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಉತ್ತರಕನ್ನಡ ಶಿರಸಿಯಲ್ಲಿ ಪ್ರೌಢ ಶಾಲೆ ಶಿಕ್ಷಕ ದಶರಥ ಮ್ಯಾಗೇರಿ(54) ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮಗನ‌‌ ಸಾವಿನ‌ ಸುದ್ದಿ ತಿಳಿದು ಇತ್ತ ವಿಜಯಪುರದಲ್ಲಿ ಅವರ ತಾಯಿ ಲಲಿತಾಬಾಯಿ‌ ಮ್ಯಾಗೇರಿ (80) ಕೂಡ ಅಸುನೀಗಿದ್ದಾರೆ.

ಕೊರೊನಾ ದೃಢಪಟ್ಟ ಹಿನ್ನೆಲೆ ತಾಯಿಯನ್ನ ಆಸ್ಪತ್ರೆಗೆ ದಾಖಲಿಸಿ ಮಗ ದಶರಥ ಮ್ಯಾಗೇರಿ ಚಿಕಿತ್ಸೆ ಕೊಡಿಸುತ್ತಿದ್ದರು. ಈ ವೇಳೆ ಅವರಿಗೂ ಸೋಂಕು ತಗುಲಿದ್ದು, ಶಿರಸಿಯಲ್ಲಿ ಮೃತಪಟ್ಟಿದ್ದಾರೆ. ಸಾವಿನ ಸುದ್ದಿ ತಿಳಿದು ಇತ್ತ ತಾಯಿ ಕೂಡ ಮಗನನ್ನು ಹಿಂಬಾಲಿಸಿದ್ದಾರೆ. ಒಂದೇ ದಿನ‌ ಒಂದೇ ಗಂಟೆ ಅಂತರದಲ್ಲಿ ವಿಧಿಯ ಆಟಕ್ಕೆ ಮಾತೃ ಹೃದಯ, ಪ್ರೀತಿಯ ಮಗ ಇಬ್ಬರು ಇಹಲೋಕ ತ್ಯಜಿಸಿದ್ದಾರೆ. (ಬೆಚ್ಚಿ ಬಿದ್ದ ಕರುನಾಡು: ಒಂದೇ ದಿನ ಕೋವಿಡ್​ಗೆ 592 ಮಂದಿ ಬಲಿ.. 48 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು)

ABOUT THE AUTHOR

...view details