ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳನ್ನ ಪಿಕ್​ನಿಕ್​ಗೆ ಕರೆದೊಯ್ಯುತ್ತಿದ್ದ ಟ್ರಾವೆಲ್ಸ್ ಪಲ್ಟಿ: ಕ್ಲೀನರ್ ಸಾವು, 30ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೇ ಶಾಲಾ ಮಕ್ಕಳನ್ನ ಪಿಕ್​ನಿಕ್​ಗೆ ಕರೆದೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..

By

Published : Feb 25, 2022, 11:30 AM IST

Updated : Feb 25, 2022, 11:54 AM IST

ಟ್ರಾವೆಲ್ಸ್ ಪಲ್ಟಿ
ಟ್ರಾವೆಲ್ಸ್ ಪಲ್ಟಿ

ಮುದ್ದೇಬಿಹಾಳ: ಸರ್ಕಾರಿ ಶಾಲಾ ಮಕ್ಕಳನ್ನು ಪಿಕ್​ನಿಕ್​ಗೆ ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲ್ಸ್ ಪಲ್ಟಿಯಾದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶಿಕ್ಷಕರು ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಳಿಕೋಟೆ ತಾಲೂಕಿನ ಕೂಚಬಾಳ-ಬಾವೂರ ಬಳಿ ನಡೆದಿದೆ.

ತಾಳಿಕೋಟೆ ತಾಲೂಕಿನ ಚೊಕಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟ್ರಾವೆಲ್ಸ್, ತಾಲೂಕಿನ ಕೂಚಬಾಳ-ಬಾವೂರ ಮಧ್ಯೆ ಏಕಾಏಕಿಯಾಗಿ ಪಲ್ಟಿ ಆಗಿದೆ. ಪರಿಣಾಮ ಕ್ಲೀನರ್ ದಾವಲಸಾಬ ಅಲ್ಲಿಸಾಬ ಸಾಲವಾಡಗಿ (40) ಎಂಬುವರು ಸಾವನ್ನಪ್ಪಿದ್ದಾರೆ.

ತಮದಡ್ಡಿ ಸರ್ಕಾರಿ ಆಸ್ಪತ್ರೆಗೆ 30 ಮಕ್ಕಳನ್ನ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

ಒಟ್ಟು ಬಸ್​ನಲ್ಲಿ 40 ಮಕ್ಕಳಿದ್ದು, 30ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಳುಗಳನ್ನು ತಮದಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೇ ಶಾಲಾ ಮಕ್ಕಳನ್ನ ಪಿಕ್​ನಿಕ್​ಗೆ ಕರೆದೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲಾ ಮುಖ್ಯ ಶಿಕ್ಷಕರಿಗೆ ನೋಟಿಸ್​ :ಶಾಲಾ ಮಕ್ಕಳನ್ನು ಪಿಕ್​ನಿಕ್​ಗೆ ಕರೆದೊಯ್ಯುವ ವೇಳೆ ಅನುಸರಿಸಬೇಕಿದ್ದ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆ ಶಾಲೆಯ ಮುಖ್ಯ ಶಿಕ್ಷಕರಿಗೆ ಈ ಕುರಿತು ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಬಿಇಒ ಹೆಚ್ ಜಿ ಮಿರ್ಜಿ ತಿಳಿಸಿದ್ದಾರೆ.

Last Updated : Feb 25, 2022, 11:54 AM IST

ABOUT THE AUTHOR

...view details