ಮುದ್ದೇಬಿಹಾಳ: ಪಟ್ಟಣದ ಸಂತ ಕನಕದಾಸ ಶಾಲೆಯ ಆವರಣದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ತಾಲೂಕು ಹಾಲುಮತ ನೌಕರರ ಸಂಘದ ವತಿಯಿಂದ ತಾಲೂಕಿನ ಅಡವಿ ಹುಲಗಬಾಳದ ವಿದ್ಯಾರ್ಥಿ ದ್ಯಾಮಣ್ಣ ಗುಂಡಕನಾಳಗೆ ಸಹಾಯಧನದ ಚೆಕ್ ವಿತರಿಸಲಾಯಿತು.
ಎಂಬಿಬಿಎಸ್ ವಿದ್ಯಾರ್ಥಿಗೆ ಮುದ್ದೇಬಿಹಾಳ ತಾಲೂಕು ಹಾಲುಮತ ನೌಕರರ ಸಂಘದ ವತಿಯಿಂದ ಧನಸಹಾಯ
ನಾನು ಆಕ್ಸಫರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ಓದಿದ್ದು ನನ್ನ ತಂದೆ ತಾಯಿ ಗೋವಾದಲ್ಲಿ ದುಡಿಯಲು ಹೋಗಿದ್ದಾರೆ. ಎರಡನೇ ವರ್ಷದ ಶುಲ್ಕ ಕಟ್ಟಲು ತೊಂದರೆಯಾಗಿತ್ತು. ನೌಕರರ ಎದುರಿಗೆ ಮನವಿ ಮಾಡಿಕೊಂಡಾಗ ನೆರವು ನೀಡಿದ್ದಾರೆ..
ಹಾಲುಮತ ನೌಕರರ ಸಂಘದ ವತಿಯಿಂದ ಧನಸಹಾಯ
ಎಂಬಿಬಿಎಸ್ ವಿದ್ಯಾರ್ಥಿಗೆ ಆರ್ಥಿಕ ಸಮಸ್ಯೆಯಿಂದಾಗಿ ಶುಲ್ಕ ಕಟ್ಟಲಾಗದೇ ತೊಂದರೆಯಲ್ಲಿದ್ದ. ಇದರಿಂದ ಹಾಲುಮತ ನೌಕರರ ಸಂಘದ ವತಿಯಿಂದ 46 ಸಾವಿರ ರೂ. ನೆರವು ನೀಡಲಾಗಿದೆ ಎಂದು ಅಧ್ಯಕ್ಷ ಎಸ್ ಹೆಚ್ ಜೈನಾಪೂರ ಹೇಳಿದ್ದಾರೆ.
ವಿದ್ಯಾರ್ಥಿ ದ್ಯಾಮಣ್ಣ ಗುಂಡಕನಾಳ ಮಾತನಾಡಿ, ನಾನು ಆಕ್ಸಫರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ಓದಿದ್ದು ನನ್ನ ತಂದೆ ತಾಯಿ ಗೋವಾದಲ್ಲಿ ದುಡಿಯಲು ಹೋಗಿದ್ದಾರೆ. ಎರಡನೇ ವರ್ಷದ ಶುಲ್ಕ ಕಟ್ಟಲು ತೊಂದರೆಯಾಗಿತ್ತು. ನೌಕರರ ಎದುರಿಗೆ ಮನವಿ ಮಾಡಿಕೊಂಡಾಗ ನೆರವು ನೀಡಿದ್ದಾರೆ. ನೌಕರರ ವರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.