ಕರ್ನಾಟಕ

karnataka

ETV Bharat / state

ಜನನಿಬಿಡ ಪ್ರದೇಶದಲ್ಲೇ ಮೊಬೈಲ್​ ಅಂಗಡಿಗೆ ಕನ್ನಹಾಕಿದ ದುಷ್ಕರ್ಮಿಗಳು - ಲೇಟೆಸ್ಟ್​ ಅಪರಾಧ ಸುದ್ದಿ

ಕೊರೊನಾ ಲಾಕ್​ಡೌನ್ ಸಡಿಲಿಕೆಯಾದ ಬಳಿಕ‌ ಮುದ್ದೇಬಿಹಾಳ ಪಟ್ಟಣ ವೃತ್ತದಲ್ಲಿರುವ ಮೊಬೈಲ್ ಅಂಗಡಿಗೆ ಕನ್ನ ಹಾಕಲಾಗಿದ್ದು, ಸಾವಿರಾರು ರೂಪಾಯಿ ಮೌಲ್ಯದ ಮೊಬೈಲ್​ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

Mobiles theft
ಮೊಬೈಲ್ ಅಂಗಡಿಗೆ ಕನ್ನ

By

Published : Jun 9, 2020, 9:11 AM IST

ಮುದ್ದೇಬಿಹಾಳ (ವಿಜಯಪುರ): ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಚೇತಕ್ ಡೈಲಿಂಗ್​​​ ಸೆಂಟರ್​​ ಹಿಂಭಾಗದ‌ ತಗಡಿನ ಶೀಟ್​ ಅನ್ನು ಒಡೆದಿರುವ ಕಳ್ಳರು ಅಂಗಡಿಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಮೊಬೈಲ್​ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಮೊಬೈಲ್ ಅಂಗಡಿಯಲ್ಲಿದ್ದ ಸಿಸಿಟಿವಿ ಕೇಬಲ್ ಸಂಪರ್ಕ ಕಡಿತಗೊಳಿಸಿ ಕಳ್ಳತನ ಮಾಡಲಾಗಿದೆ. ಈ ಘಟನೆ ನಗರದ ಜನರನ್ನು ತಲ್ಲಣಕ್ಕೀಡು ಮಾಡಿದೆ. ಮೊದಲೇ ವ್ಯಾಪಾರಸ್ಥರು ಕೊರೊನಾ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದು, ಈ ಕಳ್ಳತನ ಪ್ರಕರಣ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಮೊಬೈಲ್ ಅಂಗಡಿಗೆ ಕನ್ನ

ವಿಷಯ ತಿಳಿಯತ್ತಿದ್ದಂತೆ‌ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಅಂಗಡಿಯ ಮಾಲೀಕ ಮಯೂರಸಿಂಗ್ ರಾಯಚೂರು ಹಾಗೂ ಉದಯಸಿಂಗ್ ರಾಯಚೂರು, ಮಧ್ಯರಾತ್ರಿ ಅಂಗಡಿಯಲ್ಲಿ ಕಳುವಾದ ಬಗ್ಗೆ ಯಾರೋ ಒಬ್ಬರು ಕರೆ ಮಾಡಿ ಮಾಹಿತಿ ನೀಡಿದರು. ಅಂಗಡಿಯಲ್ಲಿ ಪ್ರತಿಷ್ಠಿತ ಕಂಪನಿಯ ಮೊಬೈಲ್ ಗಳಿದ್ದವು. ಪೊಲೀಸರು ಕಳ್ಳರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details