ವಿಜಯಪುರ:ಮಾಜಿ ಸಚಿವ ಡಾ.ಎಂ.ಬಿ.ಪಾಟೀಲ ಆಧುನಿಕ ಭಗೀರಥ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾಡಿರುವ ಟೀಕೆಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿರುಗೇಟು ನೀಡಿದ್ದಾರೆ.
ಶಾಸಕ ನಡಹಳ್ಳಿ ಹೇಳಿಕೆಗೆ ಸುನೀಲಗೌಡ ಪಾಟೀಲ ತಿರುಗೇಟು - ಸರ್ಟಿಫಿಕೇಟ್
ಮಾಜಿ ಸಚಿವ ಡಾ.ಎಂ.ಬಿ.ಪಾಟೀಲ ವಿರುದ್ಧ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾಡಿರುವ ಟೀಕೆಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿರುಗೇಟು ನೀಡಿದ್ದು, ಸಿದ್ದೇಶ್ವರ ಶ್ರೀಗಳೇ ಸರ್ಟಿಫಿಕೇಟ್ ನೀಡಿರುವಾಗ ಇವರು ಯಾರು ಎಂದು ಪ್ರಶ್ನಿಸಿದರು.
ಸಿದ್ದೇಶ್ವರ ಶ್ರೀಗಳೇ ಸರ್ಟಿಫಿಕೇಟ್ ನೀಡಿರುವಾಗ ಇವರು ಯಾರು ಎಂದು ಸುನೀಲಗೌಡ ಪಾಟೀಲ ಪ್ರಶ್ನಿಸಿದರು. ವಿಜಯಪುರದ ಶಿವಾಜಿ ವೃತ್ತದಲ್ಲಿ ಗಜಾನನ ಉತ್ಸವ ಮಂಡಳಿಯ ಗಣೇಶ ನಿಮಜ್ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಯಂತವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರದು, ಇವರದು ಯಾಕೆ ಕೇಳ್ತೀರಿ?, ಅಷ್ಟೇ ಅಲ್ಲದೇ ತಾವೇ ಮಾಧ್ಯಮಗಳಲ್ಲಿ ಸರ್ಟಿಫಿಕೇಟ್ ಕೊಟ್ಟೀದ್ದೀರಿ ಎಂದು ಪತ್ರಿಕಾ ಕಟಿಂಗ್ಸ್ ಪ್ರದರ್ಶಿಸಿದ್ರು.
ಇದೇ ಸಂದರ್ಭದಲ್ಲಿ ಸಿದ್ದೇಶ್ವರ ಸ್ವಾಮಿಗಳು ಎಂ.ಬಿ. ಪಾಟೀಲರನ್ನು ಹೊಗಳುತ್ತಿರುವ ವಿಡಿಯೋ ಪ್ರದರ್ಶಿಸಿದ ಸುನೀಲಗೌಡ ಪಾಟೀಲ, ನೀರು ಅಂದ್ರೆ ಎಂ.ಬಿ.ಪಾಟೀಲ, ಎಂ.ಬಿ.ಪಾಟೀಲ ಅಂದ್ರೆ ನೀರು ಅಂತಾ ಸಿದ್ದೇಶ್ವರ ಅಪ್ಪಾವ್ರೆ ಸಾರ್ವಜನಿಕವಾಗಿ ಹೇಳಿದ್ದಾರೆ ಎಂದರು.