ವಿಜಯಪುರ:ಲಾಕ್ಡೌನ್ನಿಂದ ಆಹಾರ ಸಿಗದೆ ಬಳಲುತ್ತಿದ್ದ ಬೀದಿ ನಾಯಿಗಳಿಗೆ, ಆಹಾರ ನೀಡುವ ಮೂಲಕ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಪುತ್ರ ದೃವ ಪಾಟೀಲ್ ಮಾನವೀಯತೆ ಮೆರೆದಿದ್ದಾರೆ.
ಬೀದಿ ನಾಯಿಗಳ ಕಷ್ಟಕ್ಕೆ ಮಿಡಿದ ಮಾಜಿ ಸಚಿವರ ಮಗ... ಆಹಾರ ನೀಡಿ ಮಾನವೀಯತೆ ಮರೆದ ದೃವ ಪಾಟೀಲ್ - ವಿಜಯಪುರ ಲೇಟೆಸ್ಟ್ ನ್ಯೂಸ್
ವಿಜಯಪುರಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಪುತ್ರ ದೃವ ಪಾಟೀಲ್, ನಗರದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಾಜ್ಯಾದ್ಯಂತ ಕೊರೊನಾ ನಿಯಂತ್ರಣ ಮಾಡುವ ಉದ್ದೇಶದಿಂದ ಎಲ್ಲೆಡೆ ಲಾಕ್ಡೌನ್ ವಿಸ್ತರಿಸಲಾಗಿದೆ. ಇದರಿಂದ ಮೂಕ ಪ್ರಾಣಿಗಳು ಆಹಾರ ಸಿಗದೆ ಪರದಾಡುತ್ತಿವೆ. ಇದನ್ನರಿತ ಎಸ್ಪಿಪಿಎ (ಸೊಸೈಟಿ ಫಾರ್ ಪ್ರೊಟೆಕ್ಸನ್ ಪ್ಲಾಂಟ್ಸ್ ಆ್ಯಂಡ್ ಎನಿಮಲ್ಸ್ ಫೌಂಡೇಷನ್ ) ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಪುತ್ರ ದೃವ ಪಾಟೀಲ್, ನಗರದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ಮತ್ತು ಬೇಯಿಸಿದ ಮೊಟ್ಟೆ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಈ ಕಾರ್ಯವನ್ನು ನಡೆಸಿಕೊಂಡು ಬಂದಿದ್ದು, ಲಾಕ್ಡೌನ್ ಮುಗಿಯುವವರೆಗೂ ಇದನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಇವರ ಎಸ್ಪಿಪಿಎ ಸಂಸ್ಥೆ ಬೆಂಗಳೂರು, ಮೈಸೂರು, ಮಂಗಳೂರು, ದೆಹಲಿ, ಸಾಗರ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಹಾಗೂ ಮುಂಬೈ ನಗರಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಪ್ರತಿದಿನ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದೆ. ಇನ್ನು ಮಗನ ಕಾರ್ಯಕ್ಕೆ ಅವರ ತಂದೆ ಎಂ.ಬಿ. ಪಾಟೀಲ್ ಕೂಡ ಸಾಥ್ ನೀಡಿದ್ದಾರೆ.