ವಿಜಯಪುರ: ಕೊರೊನಾ ವಿರುದ್ಧ ಹೋರಾಡಲು ಪೊಲೀಸರು, ಆಶಾ ಕಾರ್ಯಕರ್ತೆಯರು, ವೈದ್ಯರು ಬಹಳ ಕಷ್ಟಪಡುತ್ತಿದ್ದಾರೆ. ಈ ನಡುವೆ ನಿನ್ನೆ ಬೆಂಗಳೂರಿನ ಪಾದರಾಯನಪುರದಲ್ಲಿ ಶಂಕಿತರನ್ನು ಕ್ವಾರಂಟೈನ್ನಲ್ಲಿಡಲು ಕರೆದೊಯ್ಯುವ ಸಂದರ್ಭದಲ್ಲಿ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿರುವುದನ್ನು ಎಲ್ಲರೂ ಖಂಡಿಸಿದ್ದಾರೆ.
ತಪ್ಪು ಯಾರು ಮಾಡಿದರೂ ಅದು ತಪ್ಪೇ...ಶಾಸಕ ಶಿವಾನಂದ ಪಾಟೀಲ್ - MLA Shivananda patil reaction about Padarayanapura incident
ಬೆಂಗಳೂರು ಪಾದರಾಯನಪುರ ಗಲಭೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಶಿವಾನಂದ ಪಾಟೀಲ್ ತಪ್ಪು ಯಾರು ಮಾಡಿದರೂ ತಪ್ಪೇ. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸುತ್ತದೆ. ಜನರು ಲಾಕ್ಡೌನ್ ಮುಗಿಯುವವರೆಗೂ ಮನೆಯಲ್ಲಿರಿ ಎಂದು ಮನವಿ ಮಾಡಿದರು.
ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಾ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸೂಚಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ. ತಪ್ಪು ಯಾರು ಮಾಡಿದರೂ ತಪ್ಪೇ. ಗಲಭೆಯಲ್ಲಿ ಯಾರ ಕೈವಾಡ ಇದೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ.ಅದನ್ನು ಸರ್ಕಾರ ತನಿಖೆ ನಡೆಸುತ್ತದೆ. ಸ್ವಲ್ಪ ದಿನಗಳು ಕಷ್ಟಪಟ್ಟರೆ ಖಂಡಿತ ಅದರ ಪ್ರತಿಫಲ ದೊರೆಯುತ್ತದೆ. ಇಷ್ಟು ದಿನಗಳೇ ನಾವು ಮನೆಯಲ್ಲಿ ಕಳೆದಿದ್ದೇವೆ. ಉಳಿದ ದಿನಗಳೂ ಕೂಡಾ ಜನರು ತಾಳ್ಮೆಯಿಂದ ಮನೆಯಿಂದ ಹೊರ ಬಾರದೆ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು ಎಂದರು.