ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​ಗೆ ಶಾಸಕರಿಂದ ಸೆಲ್ಯೂಟ್..... ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ - ಮುದ್ದೇಬಿಹಾಳ ಲೆಟೆಸ್ಟ್ ನ್ಯೂಸ್

ಕೊರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿರುಯವ ಪೊಲೀಸ್ ಹಾಗೂ ಆರೋಗ್ಯ ಇಲಾಖೆಗೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಕೈಮುಗಿದು ಅಭಿನಂದನೆ ಸಲ್ಲಿಸಿದರು. ಜೊತೆಗೆ ಆ ಕುಟುಂಬಗಳಿಗೆ ತಮ್ಮ ಸ್ವಂತ ಖರ್ಚಿನಿಂದ ದಿನಸಿ ತಲುಪಿಸುವುದಾಗಿ ಭರವಸೆ ನೀಡಿದರು.

MLA Nadahalli Salute to corona warriors
ಕೊರೊನಾ ವಾರಿಯರ್ಸ್​ಗೆ ಶಾಸಕರಿಂದ ಸೆಲ್ಯೂಟ್.....ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ

By

Published : Apr 22, 2020, 1:13 PM IST

ಮುದ್ದೇಬಿಹಾಳ:ಕೊರೊನಾ ವೈರಸ್ ವಿರುದ್ಧ ತಮ್ಮ ಜೀವ ಒತ್ತೆ ಇಟ್ಟು ಹೋರಾಟ ನಡೆಸುತ್ತಿರುವ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇವೆಯನ್ನು ಕೊಂಡಾಡಿರುವ ಶಾಸಕ ಎ.ಎಸ್.ಪಾಟೀಲ್​​ ನಡಹಳ್ಳಿ ನಿನ್ನೆ ಅವರೆಲ್ಲರಿಗೂ ಸೆಲ್ಯೂಟ್ ಹೊಡೆದು ಕೈಮುಗಿದು ಅಭಿನಂದನೆ ಸಲ್ಲಿಸಿದರು.

ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಹೋರಾಡುತ್ತಿರುವ ನಿಮ್ಮ ಬೆನ್ನಿಗೆ ನಾನಿದ್ದೇನೆ. ಯಾವುದಕ್ಕೂ ಜಗ್ಗದೇ ನಮ್ಮ ತಾಲೂಕಿಗೆ ವೈರಸ್​ ಬಾರದಂತೆ ನೋಡಿಕೊಳ್ಳಬೇಕು. ಮತಕ್ಷೇತ್ರದಲ್ಲಿರುವ ಜನರ ಆರೋಗ್ಯವನ್ನು ಕಾಪಾಡುವ ಆಶಾ, ಆರೋಗ್ಯ, ಪೊಲೀಸ್, ಪೌರಕಾರ್ಮಿಕರ ಕುಟುಂಬಕ್ಕೆ ದಿನಸಿಯನ್ನು ತಮ್ಮ ಸ್ವಂತ ಖರ್ಚಿನಿಂದ ತಲುಪಿಸುವುದಾಗಿ ಹೇಳಿದ ಶಾಸಕರು ಎಲ್ಲರಿಗೂ ಗುಣಮಟ್ಟದ ಮಾಸ್ಕ್ ಕೂಡಾ ನೀಡುತ್ತಿರುವುದಾಗಿ ತಿಳಿಸಿದರು.

ABOUT THE AUTHOR

...view details