ಕರ್ನಾಟಕ

karnataka

ETV Bharat / state

1500 ಮನೆಗಳಿಗೆ ಹಾನಿ.. ಬಡವರಿಗೆ ಅನ್ಯಾಯವಾಗದಂತೆ ವರದಿ ನೀಡಲು ಸೂಚನೆ

ಹಾನಿಯ ವರದಿ ತಯಾರಿಸುವಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ನೀವು ತಯಾರಿಸುವ ನೈಜ ವರದಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರವನ್ನು ಸಂತ್ರಸ್ತರಿಗೆ ಕೊಡಲು ಸಾಧ್ಯವಾಗುತ್ತದೆ..

MLA Nadahalli
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

By

Published : Oct 31, 2020, 11:07 PM IST

ಮುದ್ದೇಬಿಹಾಳ: ತಾಳಿಕೋಟೆ, ನಾಲತವಾಡ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸೇರಿ ಅಂದಾಜು 1500 ಮನೆಗಳಿಗೆ ಹಾನಿ ಆಗಿದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ನಿಲಯದಲ್ಲಿ ಕ್ಷೇತ್ರದ ತಾಳಿಕೋಟಿ-ಮುದ್ದೇಬಿಹಾಳ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮಳೆಹಾನಿಯ ಕುರಿತು ಪರಿಶೀಲನೆ ನಡೆಸುವಾಗ ಮಾನವೀಯತೆಯ ದೃಷ್ಟಿಕೋನ ಹೊಂದಿರಬೇಕು. ಹಾನಿಯ ನೈಜ ವರದಿ ತಯಾರಿಸಿ ಬಡವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಗಡಿಭಾಗದಲ್ಲಿರುವ ನಾರಾಯಣಪುರ ಜಲಾಶಯದ ಕೃಷ್ಣಾ ನದಿಯ ಹಿನ್ನೀರು ಈ ತಾಲೂಕಿನ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಗೊಳಿಸಿದೆ. ಈ ಬಗ್ಗೆ ವಿಶೇಷ ವರದಿ ತಯಾರಿಸಬೇಕು ಎಂದು ಸಲಹೆ ನೀಡಿದರು.

ಹಾನಿಯ ವರದಿ ತಯಾರಿಸುವಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ನೀವು ತಯಾರಿಸುವ ನೈಜ ವರದಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರವನ್ನು ಸಂತ್ರಸ್ತರಿಗೆ ಕೊಡಲು ಸಾಧ್ಯವಾಗುತ್ತದೆ ಎಂದರು.

ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಮುಖ್ಯವಾಗಿ ಈರುಳ್ಳಿ, ಮೆಣಸಿನಕಾಯಿ, ಹತ್ತಿ ಹೆಚ್ಚು ಹಾನಿಗೊಳಗಾಗಿವೆ. ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳ ತಂಡ ಪರಿಶೀಲಿಸಿ ನೈಜ ವರದಿ ತಯಾರಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮುದ್ದೇಬಿಹಾಳ ತಹಶೀಲ್ದಾರ್ ಜಿ.ಎಸ್.ಮಳಗಿ, ತಾಳಿಕೋಟೆ ತಹಶೀಲ್ದಾರ್ ಅನೀಲಕುಮಾರ ಢವಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಮೀನುಗಾರಿಕೆ ಅಧಿಕಾರಿ ಬಿ.ಎಸ್.ಲಮಾಣಿ, ನೋಡಲ್ ಅಧಿಕಾರಿಗಳು, ಪಿಡಿಓಗಳು ಇದ್ದರು.

ABOUT THE AUTHOR

...view details