ವಿಜಯಪುರ: ಸೀಲ್ಡೌನ್ ಪ್ರದೇಶಕ್ಕೆ ಶಾಸಕ ದೇವಾನಂದ ಚೌಹಾಣ್ ಭೇಟಿ ನೀಡಿ ಇಲ್ಲಿನ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದ್ದಾರೆ.
ನಗರದಲ್ಲಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡ ಚಪ್ಪರಬಂದ್ ಕಾಲೋನಿಯಲ್ಲಿ ಜಿಲ್ಲಾಡಾಳಿತ ಸೀಲ್ಡೌನ್ ಮಾಡಿತ್ತು. ಹೀಗಾಗಿ ಜನ ಅಗತ್ಯ ಸಾಮಾಗ್ರಿಗಳಿಗಾಗಿ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಮಹಾನನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಅವರೊಂದಿಗೆ ತೆರೆಳಿದ ಶಾಸಕ ದೇವಾನಂದ ಬಡಾವಣೆಯ ಪ್ರತಿ ಮನೆಗಳಿಗೂ ತೆರಳಿ ಜನರ ಕಷ್ಟ ಆಲಿಸಿದರು.