ವಿಜಯಪುರ:ಜಿಲ್ಲೆಯ ಜನ, ಜಾನುವಾರುಗಳು, ರೈತರು, ಕೂಲಿಕಾರರಿಗೆ ನೆಮ್ಮದಿ, ಸಂತಸವನ್ನು ಆ ದೇವಿ ಕರುಣಿಸಲಿ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ್ ತಮ್ಮ ಕುಟುಂಬ ಸಮೇತರಾಗಿ ತುಳಜಾಪುರದ ತುಳಜಾ ಭವಾನಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತುಳಜಾ ಭವಾನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ದೇವಾನಂದ ಚವ್ಹಾಣ್ - ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ್
ಜಿಲ್ಲೆಯ ಜನ, ಜಾನುವಾರುಗಳು, ರೈತರು, ಕೂಲಿಕಾರರಿಗೆ ನೆಮ್ಮದಿ, ಸಂತಸವನ್ನು ಆ ದೇವಿ ಕರುಣಿಸಲಿ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ್ ತಮ್ಮ ಕುಟುಂಬ ಸಮೇತರಾಗಿ ತುಳಜಾಪುರದ ತುಳಜಾ ಭವಾನಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತುಳಜಾಭವಾನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು ಶಾಸಕ ದೇವಾನಂದ ಚವ್ಹಾಣ್
ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬೆಳೆ ಬಂದು ರೈತರ ಬದುಕು ಬಂಗಾರವಾಗಲಿ. ಸಾರ್ವಜನಿಕರು ನೆಮ್ಮದಿಯುತ ಜೀವನ ಸಾಗಿಸಲಿ. ಜಗದಲ್ಲಿ ಶಾಂತಿ ನೆಲೆಸಲಿ ಎಂದು ಲೋಕ ಕಲ್ಯಾಣಕ್ಕಾಗಿ ಹೋಮ ಹವನ ಹಾಗೂ ವಿಶೇಷ ಅಭಿಷೇಕ ನೆರವೇರಿಸಿ, ಜಗನ್ಮಾತೆ ಭವಾನಿಯು ಎಲ್ಲರಿಗೂ ಆಶೀರ್ವದಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಅಂಬಾ ಭವಾನಿಯ ಭಕ್ತರು, ಸದಾ ತಾಯಿಯ ಆರಾಧನೆ ಮಾಡಿ ತಾಯಿ ಭವಾನಿಯನ್ನು ಆರಾಧಿಸುತ್ತಾರೆ. ತುಳಜಾಪುರದ ತುಳಜಾ ಭವಾನಿ ಕ್ಷೇತ್ರದಲ್ಲಿ ನಡೆದ ಲೋಕ ಕಲ್ಯಾಣ ಹೋಮದಲ್ಲಿ ಶಾಸಕರ ಪತ್ನಿ ಡಾ. ಸುನಿತಾ ದೇವಾನಂದ ಚವ್ಹಾಣ ಕೂಡಾ ಭಾಗಿಯಾಗಿದ್ದರು.