ವಿಜಯಪುರ:ಹರಿಹರ ಪೀಠದ ವಚನಾನಂದ ಶ್ರೀಗಳಿಗೆ ಬ್ರೋಕರ್ ಸ್ವಾಮಿ ಎನ್ನುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ಮುಂದುವರಿಸಿದ್ದಾರೆ.
ಹರಿಹರ ಪೀಠದ ವಚನಾನಂದ ಶ್ರೀಗಳು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜೋಕರ್ ಪದ ಬಳಕೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಹರಿಹರ ಪೀಠದ ಸ್ವಾಮೀಜಿ ಬ್ರೋಕರ್ ಸ್ವಾಮಿ ಆಗಿದ್ದಾರೆ. ಹಣ ವಸೂಲಿ ಮಾಡೋದು, ಮಂತ್ರಿ ಮಾಡಿ ಎಂದು ಹಣ ಕೇಳೋ ಕೆಲಸ ಮಾಡುತ್ತಾರೆ. ಮಂತ್ರಿ ಮಾಡಿ ಎಂದು ಬ್ರೋಕರ್ ಕೆಲಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಹರಿಹರ ಶ್ರೀಗಳು 10 ಕೋಟಿ ರೂ. ಹಣ ವಸೂಲಿ ಮಾಡಿದ್ದಾರೆ. ಮಠದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂದು ಹಣ ಪಡೆದಿದ್ದಾರೆ. ಮಠದಲ್ಲಿ ಹಣದ ವಿಚಾರದಲ್ಲಿ ಬಹಳ ಅವ್ಯವಹಾರ ಮಾಡಿದ್ದಾರೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಅವ್ಯವಹಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ವಚನಾನಂದ ಶ್ರೀಗಳ ಬಣ್ಣ ಬಯಲು ಮಾಡುತ್ತೇನೆ ಎಂದು ಯತ್ನಾಳ್ ಆಕ್ರೋಶ ಹೊರಹಾಕಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾತನಾಡಿದರು ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಿದ್ದ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಚಿವರೊಬ್ಬರ ವಿರುದ್ಧ ವಾಗ್ದಾಳಿ ನಡೆಸಿದರು. ಯಾವ ಮಠ ಕಟ್ಟಿದ್ದಾರೆ, ಯಾಕೆ ಕಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾರು ಮಠ ಕಟ್ಟಿದ್ದರು, ಯಾರು ಬೆನ್ನಿಗೆ ಚೂರಿ ಹಾಕಿದರು ಎಲ್ಲವೂ ಗೊತ್ತಿದೆ ಎಂದರು. ಯಾವ ಕಾರಣಕ್ಕೆ ಮಠ ಕಟ್ಟಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ. ಮಠ ಕಟ್ಟಿದ್ದು ಸಮಾಜದ ಉದ್ಧಾರಕ್ಕಲ್ಲ, ಮಂತ್ರಿ ಸ್ಥಾನಕ್ಕಾಗಿ. ಮುಂದಿನ ದಿನಗಳಲ್ಲಿ ಜನರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾತನಾಡಿದರು ಕೊತ್ವಾಲ್ ಶಿಷ್ಯನಿಂದ ಪಾಠ ಕಲಿಯಬೇಕಾಗಿಲ್ಲ: ಬಿಜೆಪಿಯವರು ಪಕ್ಷಕ್ಕೆ ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಕೊತ್ವಾಲ ರಾಮಚಂದ್ರನ ಶಿಷ್ಯರ ಕಡೆಯಿಂದ ನಾವು ಪಾಠ ಕಲಿಯಬೇಕಿಲ್ಲ, ಕೊತ್ವಾಲ ರಾಮಚಂದ್ರ ಬೆಂಗಳೂರಿಗೆ ದೊಡ್ಡ ರೌಡಿ. ಅವನ ಸಂಪರ್ಕದಲ್ಲಿದ್ದ ವ್ಯಕ್ತಿ ನಮಗೆ ಪಾಠ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಎಂ ಬಿ ಪಾಟೀಲ ಅವರ ಪಕ್ಷದ ಬಗ್ಗೆ ಮಾತನಾಡಿದ್ದಾರೆ: ತಮ್ಮ ವಿರುದ್ಧ ಶಾಸಕ ಎಂ ಬಿ ಪಾಟೀಲ್ ಮಾತನಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಎಂ ಬಿ ಪಾಟೀಲ್ ಕಾಂಗ್ರೆಸ್ ನಾಯಕರಿದ್ದಾರೆ. ಅವರು ಮಾತನಾಡಬೇಕಾಗುತ್ತದೆ. ಎಂ ಬಿ ಪಾಟೀಲ್ ನಮ್ಮನ್ನು ಸೋಲಿಸಬೇಕು ಎಂದಿದ್ದಾರೆ. ನಾನು ಅವರನ್ನು ಸೋಲಿಸಬೇಕು ಎಂದು ಹೇಳುತ್ತಾರೆ. ಅವರು ಕಾಂಗ್ರೆಸ್, ನಾನು ಬಿಜೆಪಿ. ನನ್ನನ್ನು ಸೋಲಿಸಲು 10 ಜನ ಎಂ ಬಿ ಪಾಟೀಲ್ ಬಂದರೂ ಸಾಧ್ಯವಿಲ್ಲ ಎಂದು ಟಾಂಗ್ ಕೊಟ್ಟರು.
ಓದಿ:ಜೋಕರ್ಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು: ಶಾಸಕ ಯತ್ನಾಳ್ಗೆ ವಚನಾನಂದ ಶ್ರೀ ಪರೋಕ್ಷ ಟಾಂಗ್