ವಿಜಯಪುರ:ನಗರದಲ್ಲಿರುವ ಶಿವಾಜಿ ಪುತ್ಥಳಿಗೆ ನಿರ್ಮಿಸಲಾದ ಲಿಫ್ಟ್ಗೆ ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ಚಾಲನೆ ನೀಡಿದರು.
ವಿಜಯಪುರದ ಶಿವಾಜಿ ಪುತ್ಥಳಿಗೆ ಲಿಫ್ಟ್: ಶಾಸಕ ಯತ್ನಾಳ್ರಿಂದ ಚಾಲನೆ - ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್
ವಿಜಯಪುರದಲ್ಲಿರುವ ಶಿವಾಜಿ ಪುತ್ಥಳಿಗೆ ನಿರ್ಮಿಸಲಾದ ಲಿಫ್ಟ್ಗೆ ಶಾಸಕ ಬಸನಗೌಡ ಯತ್ನಾಳ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ಯತ್ನಾಳ್, ವಿಜಯಪುರ ನಗರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಶಾಸ್ತ್ರೀಯ ಮಾರುಕಟ್ಟೆ, ಸಿಸಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ಒಂದು ವರ್ಷದಲ್ಲಿ ಮಾದರಿ ನಗರವಾಗಿ ಅಭಿವೃದ್ಧಿ ಪಡಿಸಲಾಗುವುದು, ಜೊತೆಗೆ ಮರಾಠ ಸಮುದಾಯಕ್ಕೆ 2-ಎ ಮೀಸಲಾತಿ ಕಲ್ಪಿಸುವಕ್ಕೆ ಸದನದಲ್ಲಿ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
ವಿಜಯಪುರ ಮಹಿಳಾ ವಿವಿಯಲ್ಲಿ ಶಿವಾಜಿ ತಾಯಿ ಜಿಜಾಬಾಯಿ ಮೂರ್ತಿ ನಿರ್ಮಾಣಕ್ಕೆ ಅನೇಕ ಬಾರಿ ಕುಲಸಚಿವರಿಗೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ವಿವಿಯ ಆವರಣದಲ್ಲಿ ಜಿಜಾಬಾಯಿ ಮೂರ್ತಿ ನಿರ್ಮಿಸಲಾಗುವುದು ಎಂದು ಶಾಸಕರು ತಿಳಿಸಿದರು.