ವಿಜಯಪುರ :ಡ್ರಗ್ ಕೇಸ್ನಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಸಿಲುಕಿಕೊಂಡಿರುವ ಬಗ್ಗೆ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದಲ್ಲಿ ಸಿಲುಕಿದ್ದ ಪ್ರಭಾವಿ ವ್ಯಕ್ತಿಗಳನ್ನು ಪ್ರಕರಣದಿಂದಲೇ ಪಾರು ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಲುಕಿದ್ದ ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿ ಮಕ್ಕಳು, ಸಿನಿಮಾ ನಟರು ಇದ್ದಾರೆ. ದುರ್ದೈವ ಎಂದರೆ ಪ್ರಕರಣ ಮುಚ್ಚಿ ಹಾಕಲು ಒಂದು ಹಂತದವರೆಗೆ ಮಾತ್ರ ತನಿಖೆ ನಡೆಸಲಾಯಿತು ಎಂದು ಆರೋಪಿಸಿದರು.
ಡ್ರಗ್ಸ್ ಪ್ರಕರಣ ಕುರಿತಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿರುವುದು.. ಖಾನ್‌ಗಳ ವಿರುದ್ಧ ಯತ್ನಾಳ್ ವಾಗ್ದಾಳಿ : ದೇಶ ಸುರಕ್ಷಿತ ಅಲ್ಲ ಎಂದ ಖಾನ್ಗಳು ಈಗ ದೇಶ ಬಿಡಲಿ. ಅವರ ಮಕ್ಕಳೆಲ್ಲ ನೇರವಾಗಿ ಅಫ್ಘಾನಿಸ್ತಾನಕ್ಕೆ ಹೋಗಲಿ. ಸುರಕ್ಷಿತವಾಗಿ ತಾಲಿಬಾನ್ ಕೆಳಗೆ ನಟನೆ ಮಾಡಿಕೊಂಡಲು ಇರಲಿ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಹಿಂದೂಗಳು ಸಿನಿಮಾ ನೋಡ್ತಾರೆ, ಇವರು ಸಾವಿರಾರು ಕೋಟಿ ಗಳಿಕೆ ಮಾಡ್ತಾರೆ. ಅವರ ಮಕ್ಕಳೆಲ್ಲ ಹೀಗೆ ಮಜಾ ಮಾಡಿಕೊಂಡು ದೇಶದ ವ್ಯವಸ್ಥೆ ಕೆಡಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಆರ್ಥಿಕ ವ್ಯವಸ್ಥೆ ಡ್ರಗ್ಸ್ ಮೇಲೆ ನಿಂತಿದೆ. ಡ್ರಗ್ಸ್ ಕಟ್ ಮಾಡಿ ಬಿಟ್ಟರೆ ಭಯೋತ್ಪಾದನೆ ತಡೆಯಬಹುದು. ಪ್ರಧಾನಿ ಮೋದಿ ಅದನ್ನು ಮಾಡ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಪರೇಷನ್ ಹಸ್ತ ಕುರಿತಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿರುವುದು.. ಆಪರೇಷನ್ ಹಸ್ತ :ಕಾಂಗ್ರೆಸ್ ಮುಖಂಡ ರಾಜು ಕಾಗೆ ಬಿಜೆಪಿಯ 40 ಶಾಸಕರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆಪರೇಷನ್ ಹಸ್ತ ಎನ್ನುವುದು ಬೆದರಿಸುವ ತಂತ್ರಗಾರಿಕೆ ಅಷ್ಟೇ.. ಸದ್ಯ ಬಿಜೆಪಿ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.
ಪಂಜಾಬ್ನಲ್ಲಿ ಕಾಂಗ್ರೆಸ್ ಮುಳುಗಿದೆ. ನಂತರ ಛತ್ತೀಸಗಢ್ನಲ್ಲಿಯೂ ಇದೇ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂದು ಡಿ ಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ಪೈಪೋಟಿ ನಡೆಸುತ್ತಿರುವಾಗ, 40 ಜನ ಕಾಂಗ್ರೆಸ್ ಸೇರ್ಪಡೆ ಎಂದರೆ ಇದೇನು ಎಪಿಎಂಸಿ ಅಂತಾ ತಿಳಿದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.
ಬೈ ಎಲೆಕ್ಷನ್ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿರುವುದು.. ಅಸಮಾಧಾನ ಎಲ್ಲ ಪಕ್ಷಗಳಲ್ಲಿ ಇದೆ. ಈಗ ವಿಜಯಪುರಕ್ಕೆ ಮಂತ್ರಿ ಸ್ಥಾನ ನೀಡಿಲ್ಲ ಎಂದು ಜನತೆಯಲ್ಲಿ ಅಸಮಾಧಾನವಿದೆ. ಮಂತ್ರಿ ಸ್ಥಾನ ಕೇಳಿದ್ದೆವು. ಆದರೆ, ಕೊಟ್ಟಿಲ್ಲ. ಈಗ ಹೇಳಲು ಆಗದು. ಮುಖ್ಯಮಂತ್ರಿ ಸ್ಥಾನವೇ ಸಿಗಬಹುದು ಎನ್ನುವ ಮೂಲಕ ತಮ್ಮ ಸಿಎಂ ಆಗುವ ಆಸೆಯನ್ನು ಮತ್ತೊಮ್ಮೆ ಹೊರ ಹಾಕಿದರು.
ಉಪಚುನಾವಣೆ ಉಸ್ತುವಾರಿ :ಸಿಂದಗಿ ಉಪಚುನಾವಣೆಯ ಉಸ್ತುವಾರಿ ಪಕ್ಷ ತಮಗೆ ನೀಡಿದೆ. ಹೀಗಾಗಿ, ತಮ್ಮ ಅಭ್ಯರ್ಥಿ ಗೆಲುವು ಸಾಧಿಸಲು ನಾನು ಪ್ರಯತ್ನ ಮಾಡುತ್ತೇನೆ. ಉಪಚುನಾವಣೆಗಳು ಸ್ಥಳೀಯ ಅಭ್ಯರ್ಥಿಗಳ ಪ್ರಭಾವದ ಮೇಲೆ ಇರುತ್ತದೆ. ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯತಂತ್ರ ರೂಪಿಸಲಾಗುವುದು ಎಂದರು.
ಓದಿ:ಮನೆಗಳಿಗೆ ನುಗ್ಗಿದ ಮಳೆ ನೀರನ್ನು ಹೊರತೆಗೆಯುವುದು ನಮ್ಮ ಮೊದಲ ಆದ್ಯತೆ : ಸಿಎಂ ಬೊಮ್ಮಾಯಿ