ವಿಜಯಪುರ: ಸರ್ಕಾರ ಹಿಂದೂಗಳ ಹಬ್ಬಕ್ಕೆ ಕೋವಿಡ್ ನೆಪವೊಡ್ಡಿ ನಿರ್ಬಂಧ ಹೇರಿದರೆ ನಾನು ಸಹಿಸುವುದಿಲ್ಲ. ಗಣೇಶೋತ್ಸವಕ್ಕೆ ಕಂಡಿಷನ್ ಹಾಕಿದ್ದಾರೆ. ಈ ಬಗ್ಗೆ ನಾನು ಸಿಎಂ ಜೊತೆ ಮಾತನಾಡಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದರೆ ನಾವು ಕೇಳಲ್ಲ: ಶಾಸಕ ಯತ್ನಾಳ್
ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆ ಮಾಡುವವರು ಯಾರೂ ಅಂಜಬೇಡಿ. ಸರ್ಕಾರಕ್ಕೆ ಗಣೇಶ ಹಬ್ಬ ಬಂದಾಗ ಮಾತ್ರ ಕೊರೊನಾ ನಿಯಮ ನೆನಪಾಗುತ್ತದೆಯೇ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದ್ದಾರೆ.
ವಿಜಯಪುರದ ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾರೂ ಅಂಜಬೇಡಿ. ಸರ್ಕಾರಕ್ಕೆ ಗಣೇಶ ಹಬ್ಬ ಬಂದಾಗ ಮಾತ್ರ ಕೊರೊನಾ ನಿಯಮ ನೆನಪಾಗುತ್ತದೆಯೇ? ಎಂದು ಪ್ರಶ್ನಿಸಿದರು.
ಮೂರನೇ ಅಲೆಯ ಪರಿಣಾಮ ಜಿಲ್ಲೆಯ ಮೇಲೆ ಬೀರಲ್ಲ. ಈಗ ಪ್ರತಿದಿನ ಜಿಲ್ಲೆಯಲ್ಲಿ ಒಂದೇ ಪಾಸಿಟಿವ್ ಪ್ರಕರಣ ಬರುತ್ತಿದೆ. ಎಕ್ಸ್ಪರ್ಟ್ ಯಾವ ಆಧಾರದ ಮೇಲೆ ವೈಜ್ಞಾನಿಕ ಮಾಹಿತಿ ಕೊಟ್ಟಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಗಣೇಶೋತ್ಸವ ಆಚರಣೆ ಮಾಡಲಾಗುತ್ತದೆ. ಬರೀ ಹಿಂದೂಗಳ ಹಬ್ಬದ ಮೇಲೆ ಕಾನೂನು ಮಾಡಿದರೆ ನಾವು ಕೇಳಲ್ಲ ಎಂದು ಯತ್ನಾಳ್ ಹೇಳಿದ್ರು.