ಕರ್ನಾಟಕ

karnataka

ETV Bharat / state

ಕೆಲವರು ನನ್ನ ಹೆಸರನ್ನು ವಿನಾಕಾರಣ ಕೆಡಿಸಲು ಯತ್ನಿಸುತ್ತಿದ್ದಾರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ - ಜಗದ್ಗುರು ಬಸವಜಯಮೃತ್ಯುಂಜಯ ಶ್ರೀ

ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮಾಜಿಯ ಜಯಂತ್ಯುತ್ಸವ ಹಾಗೂ 2ಎ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಭಾಗವಹಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

By

Published : Nov 8, 2022, 9:07 PM IST

ಮುದ್ದೇಬಿಹಾಳ:ಬಣಜಿಗ ಸಮಾಜದ ಕೆಲವರು ನನ್ನ ಹೆಸರನ್ನು ವಿನಾಕಾರಣ ಕೆಡಿಸಲು ಯತ್ನಿಸುತ್ತಿದ್ದು, ನಾನು ಯಾರಿಗೂ ಬೈದಿಲ್ಲ. ಅಲ್ಲದೇ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿದರು

ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮಾಜಿಯ ಜಯಂತ್ಯುತ್ಸವ ಹಾಗೂ 2ಎ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಅವರಿಗೆ ನಾನು ಅಧಿವೇಶನದಲ್ಲಿಯೇ ಪ್ರಶ್ನಿಸಿದ್ದೇನೆ ಎಂದ ಶಾಸಕ ಯತ್ನಾಳ್​ ಅವರು ನಮ್ಮ ಸಮಾಜಕ್ಕೆ ಈಗ 2ಎ ಕೊಡುವ ಪರಿಸ್ಥಿತಿ ಬಂದಿದೆ. ಕೆಲವು ಮಂದಿ ಡಬ್ಬಲ್ ಗೇಮ್ ಆಡುತ್ತಾರೆ. ಈಗ ಸಮಾಜಕ್ಕೆ ಪ್ರಾಣ ಕೊಡ್ತೀವಿ ಅಂತ ಓಡಾಡ್ತಿದ್ದಾರೆ. ಪ್ರಾಣ ಕೊಡುವ ಮಕ್ಳು ಆಗ ಎಲ್ಲಿ ಹೋಗಿದ್ರಿ. ಒಬ್ಬನ ರೊಕ್ಕದ ಮೇಲೆ ಸಮಾಜ ಮಾರಿಕೊಳ್ಳುವುದು ಬೇಡ.

ಪಂಚಮಸಾಲಿ ಸಮಾಜಕ್ಕೆ ಬೇಕಾದದ್ದು 2ಎ ಕೆಲವರು ಫೋಟೋ ಮ್ಯಾಗ ಕಾಟ ಹಾಕಿದ್ದೀರಿ. ನೀವು ಎಲ್ಲೆಲ್ಲಿ ಕಾಟ ಹಾಕಿದ್ದೀರಿ ನಾನು ನಿಮ್ಮನ್ನು ಕಾಟ ಹಾಕ್ತಿನಿ. ನಮ್ಮ ಸಮಾಜದವರ ಹೆಸರು ತೆಗೆದುಕೊಳ್ಳದೇ ನಿಮ್ಮ ಹೆಸರು ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವು ಬಣಜಿಗ ಸಮಾಜದವರೇ ವೈಯಕ್ತಿಕವಾಗಿ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವವರೇ ನನ್ನ ಕ್ಷಮೆ ಕೇಳಬೇಕು. ನಾನು ಬಗ್ಗುವ ಮಗ ಅಲ್ಲ ಎಂದು ಯತ್ನಾಳ್​ ಹೇಳಿದರು. ಈ ವೇಳೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ ಇದ್ದರು.

ಓದಿ:ನಾನು ಯಾರ ಬಳಿಯೂ ಕೋರ್ ಕಮಿಟಿ ಅಧ್ಯಕ್ಷ, ಸದಸ್ಯನ ಮಾಡಿ ಅಂತಾ ಹೋಗಿಲ್ಲ: ಯತ್ನಾಳ ಟಾಂಗ್​

ABOUT THE AUTHOR

...view details