ಕರ್ನಾಟಕ

karnataka

ETV Bharat / state

ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರಾ? : ಅಪ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿದವರ ವಿರುದ್ಧ ಶಾಸಕ ಯತ್ನಾಳ್ ಕಿಡಿ - ವಿಜಯಪುರ ಸುದ್ದಿ

ನರೇಂದ್ರ ಮೋದಿ ಪ್ರಧಾನಿಯಾಗಿರದೆ ಇದ್ದರೇ ಇವರು ತಾಲಿಬಾನಿಗಳನ್ನು ಇಂಪೋರ್ಟ್ ಮಾಡಿಕೊಳ್ತಿದ್ರು ಎಂದು ಗಂಭೀರ ಆರೋಪ ಮಾಡಿದರು. ಪ್ರಧಾನಿ ಮೋದಿಯಿಂದ ನಾವು ಸುರಕ್ಷಿತವಾಗಿದ್ದೇವೆ. ದೇಶದ ಒಳಗಡೆ ಇರುವ ದುಷ್ಟ ಶಕ್ತಿಗಳನ್ನು ತಾಲಿಬಾನಿಗಳಿಗೆ ಹೋಲಿಸಿದ ಅವರು, ಅಂಥವರಿಗೆ ಗುಂಡು ಹಾರಿಸಬೇಕು..

mla basanagowda patil yatnal outrage against congress leaders
ಶಾಸಕ ಯತ್ನಾಳ್​ ಆಕ್ರೋಶ

By

Published : Aug 22, 2021, 3:22 PM IST

ವಿಜಯಪುರ :ಎಲ್ಲ ವಿಚಾರದಲ್ಲೂ ಮೂಗು ತೂರಿಸುವ ಬುದ್ಧಿಜೀವಿಗಳು ಅಪ್ಘಾನಿಸ್ತಾನ ಬೆಳವಣಿಗೆ ವಿಚಾರಕ್ಕೆ ಮೌನ ತೋರುತ್ತಿರುವ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬುದ್ಧಿಜೀವಿಗಳು ಲದ್ದಿ ತಿಂದಿದ್ದಾರಾ? ಬುದ್ಧಿ ಜೀವಿಗಳು ತಾಲಿಬಾನಿ ಸಂತಾನ ಎಂದು ಆಕ್ರೋಶ ಹೊರ ಹಾಕಿದ್ರು. ಅಫ್ಘಾನಿಸ್ತಾನದ ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡಲ್ಲ..? ಡಿಕೆಶಿ ಯಾಕೆ ಮಾತಾಡಲ್ಲ..? ಎಂದು ಪ್ರಶ್ನಿಸಿದರು.

ಅಫ್ಘಾನಿಸ್ತಾನದ ವಿಚಾರದಲ್ಲಿ ಮಾತನಾಡದವರ ಬಗ್ಗೆ ಶಾಸಕ ಯತ್ನಾಳ್​ ಕಿಡಿ

ನರೇಂದ್ರ ಮೋದಿ ಪ್ರಧಾನಿಯಾಗಿರದೆ ಇದ್ದರೇ ಇವರು ತಾಲಿಬಾನಿಗಳನ್ನು ಇಂಪೋರ್ಟ್ ಮಾಡಿಕೊಳ್ತಿದ್ರು ಎಂದು ಗಂಭೀರ ಆರೋಪ ಮಾಡಿದರು. ಪ್ರಧಾನಿ ಮೋದಿಯಿಂದ ನಾವು ಸುರಕ್ಷಿತವಾಗಿದ್ದೇವೆ. ದೇಶದ ಒಳಗಡೆ ಇರುವ ದುಷ್ಟ ಶಕ್ತಿಗಳನ್ನು ತಾಲಿಬಾನಿಗಳಿಗೆ ಹೋಲಿಸಿದ ಅವರು, ಅಂಥವರಿಗೆ ಗುಂಡು ಹಾರಿಸಬೇಕು ಎಂದರು.

ಅಫ್ಘಾನ್​ನಲ್ಲಿರುವ ಹಿಂದು-ಸಿಖ್​ ಬಿಟ್ಟರೆ ಉಳಿದ ಧರ್ಮದವರಿಗೆ ದೇಶಕ್ಕೆ ಪ್ರವೇಶ ಕೊಡಬಾರದು ಎಂದು ಒತ್ತಾಯಿಸಿದರು. ಬರ್ತೀವಿ ಅಂದ್ರೇ ಹಿಂದು-ಬೌದ್ಧ-ಜೈನ ಧರ್ಮ ಸ್ವೀಕರಿಸಿ ಬರಲಿ ಎಂದರು.

ಬಾಲಿವುಡ್ ಖಾನ್‌ಗಳ ವಿರುದ್ಧ ಹರಿಹಾಯ್ದ ಯತ್ನಾಳ್ :ಬಾಲಿವುಡ್‌ನ ಸೂಪರಸ್ಟಾರ್ ಖಾನ್‌ಗಳು ಈಗ ಅಪ್ಘಾನಿಸ್ತಾನಕ್ಕೆ ಹೋಗಲಿ. ಭಾರತ ಸುರಕ್ಷಿತ ಅಲ್ಲ ಅನ್ನೋ ಖಾನ್ ನಟರು ಅಫ್ಘಾನ್​ಗೆ ಹೋಗಿ ಜೀವನ ಮಾಡಲಿ ಎಂದು ಯತ್ನಾಳ್ ಕಿಡಿಕಾರಿದರು.

ರಾಹುಲ್​ ಗಾಂಧಿ ವಿರುದ್ಧ ಯತ್ನಾಳ್ ಟೀಕೆ :ರಾಹುಲ್‌ ಗಾಂಧಿ ಮುಸ್ಲಿಂ ಜನಾಂಗದವರಂತೆ ವರ್ತಿಸುತ್ತಾರೆ. ಅವರು ಹಿಂದೂನೂ ಅಲ್ಲ, ಕ್ರಿಶ್ಚಿಯನ್ನೂ ಅಲ್ಲ. ಪ್ರಧಾನಿಗಳು ದೇಶದ ವಿರುದ್ಧ ಮಾತನಾಡೋ ಓವೈಸಿಗಳಂತವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದರು.

ಜಮಖಂಡಿ ಯುವಕ ಪೋಸ್ಟ್ ವಿಚಾರ :'ಅಫ್ಘಾನಿಸ್ತಾನಿ ಜಿಂದಾಬಾದ್' ಎಂದ ಯುವಕ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್, ಇಂಥವರನ್ನು ತಾಲಿಬಾನ್‌ಗಳ ಬಳಿ ಕಳುಹಿಸಬೇಕು. ನಮ್ಮ ದೇಶದಲ್ಲಿ ಇಟ್ಟುಕೊಳ್ಳಬಾರದು ಎಂದು ಕಿಡಿಕಾರಿದರು.

ಸ್ವಾಮೀಜಿಗಳ ವಿರುದ್ಧವೂ ವಾಗ್ದಾಳಿ :ಇಸ್ಲಾಂ ಧರ್ಮ ಯಾರನ್ನು ಸಹೋದರತ್ವದಿಂದ ನೋಡಿಲ್ಲ. ಕೆಲ ಸ್ವಾಮೀಜಿಗಳು, ಪ್ರವಚನದಲ್ಲಿ ಹಿಂದೂ ಮುಸ್ಲಿಂ ಭಾಯಿ-ಭಾಯಿ ಎನ್ನುತ್ತಾರೆ. ಇವತ್ತು ಯಾಕೆ ಮಾತನಾಡಲ್ಲ. ಇಷ್ಟೊಂದು ಹೋರಾಟ ಮಾಡೋರು ತಾಲಿಬಾನ್ ಬಗ್ಗೆ ಯಾಕೆ ಮಾತನಾಡಲ್ಲ ಎಂದು ಯತ್ನಾಳ್ ಪ್ರಶ್ನಿಸಿದರು.

ABOUT THE AUTHOR

...view details