ವಿಜಯಪುರ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರುಗಳು ವೈಯುಕ್ತಿಕ ಹೇಳಿಕೆ ನೀಡುತ್ತಿದ್ದಾರೆ, ಅದನ್ನೂ ಬಿಟ್ಟು ರಾಜಕೀಯ, ಅಭಿವೃದ್ಧಿ ಸಮಸ್ಯೆ ಬಗ್ಗೆ ಮಾತನಾಡಲಿ ಎಂದರು.
ಸಿಂದಗಿಯಲ್ಲಿ ಮಾತನಾಡಿದ ಅವರು, ತೀರಾ ವೈಯಕ್ತಿಕ ಹೇಳಿಕೆಗಳು ಸರಿಯಲ್ಲ. ವಿರೋಧಿಗಳು ಬಿಜೆಪಿ ಸರ್ಕಾರದ ಬಗ್ಗೆ ಹಾಗೂ ಪ್ರಧಾನಿ ಮೋದಿ ಅವರ ವೈಯುಕ್ತಿಕ ಕುರಿತು ಮಾತಾಡಿದಾಗ ಬಿಜೆಪಿ ಮಾತನಾಡಿದೆ. ಆದರೆ, ಯಾವುದನ್ನು ವೈಯಕ್ತಿಕವಾಗಿ ಎಂದೂ ಮಾತನಾಡಿಲ್ಲ. ಮೌತ್‌ಕಾ ಸೌದಾಗರ್, ಚಹಾ ಮಾರುವವ ಎಂಬ ವೈಯಕ್ತಿಕ ಹೇಳಿಕೆಗಳು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದ ಆರಂಭವಾಯಿತು ಎಂದರು.
ಜಮೀರ್ ಅಹ್ಮದ್ ಖಾನ್, ಓವೈಸಿ ಇವರೆಲ್ಲ ಒಂದು ರೀತಿ ಹದ್ದು ಮೀರಿ ವರ್ತನೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಎಲ್ಲ ಇತಿಮಿತಿಗಳನ್ನು ಮೀರಿ ಮಾತನಾಡಿ ಉದ್ದಟತನ ಮೆರೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ರೀತಿ ಮುಂದುವರಿದರೆ ತಕ್ಕ ಉತ್ತರ ಕೊಡಬೇಕಾಗುತ್ತದೆ