ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಖುಷಿಯಾಗಿದ್ದಾರೆ. ಅವರು ಸಿಎಂ ಜೊತೆಗಿನ ಮುನಿಸಿನ ವಿಚಾರ ಇನ್ನೂ ಸ್ವಲ್ಪ ದಿನದಲ್ಲಿ ಸುಖಾಂತ್ಯವಾಗಲಿದೆ ಎಂದು ಹೇಳುವ ಮೂಲಕ ವಸತಿ ಸಚಿವ ವಿ.ಸೋಮಣ್ಣ, ಯತ್ನಾಳ ಜತೆಗಿನ ಸಂಧಾನ ಯಶಸ್ವಿಯಾಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.
ಬಿಎಸ್‌ವೈ ಸಿಎಂ ಆಗಲೆಂದು ಯತ್ನಾಳ ಒಂದು ಕಾಲದಲ್ಲಿ ಹೋರಾಟ ನಡೆಸಿದ್ದಾರೆ : ಸಚಿವ ವಿ.ಸೋಮಣ್ಣ - minister v. somanna
ಮಂಗಳವಾರ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಇನ್ನೂ 15-20 ದಿನದಲ್ಲಿ ಸರಿ ಹೋಗಲಿದೆ ಎಂದರು. ಯತ್ನಾಳ ಅವರಿಗೆ ಇನ್ನೂ 25 ವರ್ಷ ರಾಜಕೀಯ ಭವಿಷ್ಯವಿದೆ..
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಇನ್ನೂ 15-20 ದಿನದಲ್ಲಿ ಸರಿ ಹೋಗಲಿದೆ ಎಂದರು. ಯತ್ನಾಳ ಅವರಿಗೆ ಇನ್ನೂ 25 ವರ್ಷ ರಾಜಕೀಯ ಭವಿಷ್ಯವಿದೆ. ಒಂದು ಕಾಲದಲ್ಲಿ ಬಿಎಸ್‌ವೈ ಸಿಎಂ ಆಗಲಿ ಎಂದು ಯತ್ನಾಳ ಹೋರಾಟ ನಡೆಸಿದ್ದಾರೆ. ಈಗ ಎಲ್ಲಾ ಸರಿಯಾಗುತ್ತದೆ, ಯಾರು ತಲೆಕೆಡಿಸಿಕೊಳ್ಳಬಾರದು ಎಂದರು.
ಯತ್ನಾಳಗೆ ಸಚಿವ ಸ್ಥಾನ..? : ಶಾಸಕ ಬಸನಗೌಡ ಪಾಟೀಲಗೆ ಸಚಿವ ಸ್ಥಾನ ಯಾಕಾಗಬಾರದು ಎನ್ನುವ ಮೂಲಕ ಯತ್ನಾಳಗೆ ಸಚಿವ ಸ್ಥಾನ ಸಿಗುವ ಕುರಿತು ಸಚಿವ ಸೋಮಣ್ಣ ಸುಳಿವು ನೀಡಿದರು. ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟಿದ್ದು, ಅವರು ನಮ್ಮ ನಾಯಕರು, ಅವರು ತೀರ್ಮಾನ ಮಾಡಿದಂತೆ ಆಗುತ್ತದೆ. ಅವರ ತೀರ್ಮಾನಕ್ಕೆ ನಾವೆಲ್ಲಾ ಬದ್ಧ ಎಂದರು.