ಮುದ್ದೇಬಿಹಾಳ(ವಿಜಯಪುರ) :ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಶನ್‌ಲ್ಲಿದ್ದ ಮತಕ್ಷೇತ್ರದ ಶಾಸಕ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ ಎಸ್ ಪಾಟೀಲ ನಡಹಳ್ಳಿ ಮತ್ತು ಅವರ ತಂದೆ ಸಂಗನಗೌಡ ಪಾಟೀಲ ಅವರನ್ನು ಬುಧವಾರ ಸಂಜೆ ಬೆಂಗಳೂರಿಗೆ ತೆರಳಿ ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಾಸಕ ನಡಹಳ್ಳಿ ಶಿಫ್ಟ್ - ಶಾಸಕ, ಎ.ಎಸ್.ಪಾಟೀಲ ನಡಹಳ್ಳಿ
ಶಾಸಕರು ಹಾಗೂ ಅವರ ತಂದೆಯವರ ಆರೋಗ್ಯ ಸ್ಥಿರವಾಗಿದೆ. ಕುಟುಂಬದವರು, ಶಾಸಕರ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಬೆಂಗಳೂರಿನಲ್ಲಿರುವ ಶಾಸಕರ ಆಪ್ತ ಸಹಾಯಕ ಬಾಬುರಾವ್ ಕುಲಕರ್ಣಿ ತಿಳಿಸಿದ್ದಾರೆ..

ಎ.ಎಸ್.ಪಾಟೀಲ ನಡಹಳ್ಳಿ
ಇಬ್ಬರಿಗೂ ಅಲ್ಲಿರುವ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಸೋಂಕಿನ ಲಕ್ಷಣಗಳು ಅಲ್ಪ ಪ್ರಮಾಣದಲ್ಲಿ ಕಾಣಿಸಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶಾಸಕರು, ಈ ತೀರ್ಮಾನ ಕೈಗೊಂಡಿದ್ದಾರೆ.
ಶಾಸಕರು ಹಾಗೂ ಅವರ ತಂದೆಯವರ ಆರೋಗ್ಯ ಸ್ಥಿರವಾಗಿದೆ. ಕುಟುಂಬದವರು, ಶಾಸಕರ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಬೆಂಗಳೂರಿನಲ್ಲಿರುವ ಶಾಸಕರ ಆಪ್ತ ಸಹಾಯಕ ಬಾಬುರಾವ್ ಕುಲಕರ್ಣಿ ತಿಳಿಸಿದ್ದಾರೆ.