ಮುದ್ದೇಬಿಹಾಳ:ತಾಳಿಕೋಟೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತಮ್ಮ ಸೋಲು ನಿಶ್ಚಿತವೆಂಬುದು ಗೊತ್ತಾಗಿ ಬಿಜೆಪಿಯ ಮುಗ್ಧ ಸ್ವಭಾವದ ಸದಸ್ಯ ರಾಮನಗೌಡ ಇಂಗಳಗಿ ಅವರನ್ನು ಕರೆದುಕೊಂಡು ತಮ್ಮ ಕೈಯನ್ನು ತಾವೇ ಸುಟ್ಟುಕೊಂಡಿದ್ದಾರೆಂದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಶಾಸಕ ನಡಹಳ್ಳಿ ಅವರ ಮೇಲೆ ನನಗೆ ನಂಬಿಕೆ ಇದೆ: ನಾನು ಯಾವಾಗಲೂ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದೇನೆ. ನಾನು ಕಾಂಗ್ರೆಸ್ ಸದಸ್ಯರ ಬಾಹ್ಯ ಬೆಂಬಲದಿಂದ ಅಧ್ಯಕ್ಷನಾದೆ. ಆದರೆ ನಾನು ಪಕ್ಷ ತ್ಯಜಿಸಿಲ್ಲ. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಹೀಗಾಗಿ ಅವರ ಜೊತೆ ಸೇರಿಕೊಂಡು ಅವರ ಸಲಹೆಗಳಂತೆ ಮುಂದಿನ ದಿನಗಳಲ್ಲಿ ಎಪಿಎಂಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆಂದು ತಾಳಿಕೋಟಿ ಎಪಿಎಂಸಿ ಅಧ್ಯಕ್ಷ ರಾಮನಗೌಡ ಇಂಗಳಗಿ ಹೇಳಿದರು.