ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಕಿಡಿಗೇಡಿಗಳು - ETv Bharat kannada news

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಮಹಾರಾಷ್ಟ್ರದಲ್ಲಿ ಕರ್ನಾಟಕದ ವಿರುದ್ಧ ಘೋಷಣೆ ಕೂಗಿದ ಕೆಲವು ಪುಂಡರು ರಾಜ್ಯ ಸರ್ಕಾರಿ ಬಸ್​ಗಳಿಗೆ ಮಸಿ ಬಳಿದಿದ್ದಾರೆ.

Miscreants smeared Karnataka buses in Maharashtra
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳಿಗೆ ಮಸಿ ಬಳಿದ ಕೀಡಿಗೇಡಿಗಳು

By

Published : Dec 7, 2022, 6:40 PM IST

Updated : Dec 7, 2022, 8:15 PM IST

ವಿಜಯಪುರ:ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಕೆಲವು ಕಿಡಿಗೇಡಿಗಳು ಕರ್ನಾಟಕದ ಬಸ್​ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದಾರೆ. ಕರ್ನಾಟಕದ ವಿರುದ್ಧ ಘೋಷಣೆ ಕೂಗಿರುವ ಮರಾಠಿ ಸಂಘಟನೆಯ ಸದಸ್ಯರು ಸೋಲಾಪುರದಿಂದ ವಿಜಯಪುರಕ್ಕೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಹಾಗೂ ಸೋಲಾಪುರ ಮುದ್ದೇಬಿಹಾಳ ಬಸ್​ ಸಂಚಾರಕ್ಕೆ ಅಡ್ಡಿಪಡಿಸಿ ಸಿಎಂ ಬೊಮ್ಮಾಯಿ ಭಾವಚಿತ್ರಕ್ಕೆ ಮಸಿ ಬಳಿದರು.

ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಕಿಡಿಗೇಡಿಗಳು

ಕಳೆದ ಹಲವು ದಿನಗಳಿಂದ ಮತ್ತೆ ಮನ್ನೆಲೆಗೆ ಬಂದಿರುವ ಗಡಿ ವಿವಾದ ತಾರಕಕ್ಕೇರಿದ್ದು, ಬಸ್‌ಗಳ ಮೇಲೆ ಕಲ್ಲು ತೂರಾಟ, ಗಾಜು, ನಾಮಫಲಕಕ್ಕೆ ಮಸಿ ಬಳೆಯುವ ಕೆಲಸಗಳು ನಡೆಯುತ್ತಿವೆ. ಕರ್ನಾಟಕದಿಂದ ರೋಗಿಗಳು ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಲಾರದೇ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಷ್ಟೇ ಅಲ್ಲ, ವಿಜಯಪುರದಿಂದ 100 ಕಿ.ಮೀ ದೂರದಲ್ಲಿರುವ ಸೋಲಾಪುರ ವಾಣಿಜ್ಯ ಕೇಂದ್ರವಾಗಿದ್ದು ಜಿಲ್ಲೆಯ ವ್ಯಾಪಾರಿಗಳು ಹೆಚ್ಚಾಗಿ ಅಲ್ಲಿಗೆ ಹೋಗುವ ವಾಡಿಕೆ ಇದೆ. ಈಗ ವ್ಯಾಪಾರ ವಹಿವಾಟಿಗೂ ಹೊಡೆತ ಬಿದ್ದಿದೆ.

ಇದನ್ನೂ ಓದಿ:ಕರ್ನಾಟಕದ ಬಸ್‌ಗಳಿಗೆ ಶಿವಸೇನೆ ಮಸಿ ಬಳಿಯುವುದು ದೊಡ್ಡ ತಪ್ಪು: ಸಚಿವ ಶ್ರೀಮಂತ ಪಾಟೀಲ

Last Updated : Dec 7, 2022, 8:15 PM IST

ABOUT THE AUTHOR

...view details