ಕರ್ನಾಟಕ

karnataka

ETV Bharat / state

ಬಹಿರ್ದೆಸೆಗೆ ತೆರಳಿದ್ದ ವೇಳೆ ಅಪಹರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹ - minor girl raped in muddebihal

ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ ಬಿ ಮುದೂರ, ಜಿಲ್ಲಾ ಸಂಚಾಲಕ ಹರೀಶ್ ನಾಟೀಕಾರ, ಮುಖಂಡರಾದ ಪ್ರಕಾಶ್ ಚಲವಾದಿ, ಬಸವರಾಜ ಸಿದ್ದಾಪುರ, ಶಿವು ಶಿವಪೂರ, ಭಗವಂತ ಕಬಾಡೆ, ತಿಪ್ಪಣ್ಣ ಗೋನಾಳ, ಮಲ್ಲು ತಳವಾರ, ದೇವರಾಜ ಹಂಗರಗಿ ಮತ್ತಿತರರು ಇದ್ದರು..

minor girl raped accuse arrested in muddebihal
ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹ

By

Published : Oct 13, 2021, 9:10 PM IST

ಮುದ್ದೇಬಿಹಾಳ/ವಿಜಯಪುರ: ತಾಲೂಕಿನ ತಂಗಡಗಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಮಂಗಳವಾರ ನಡೆದಿದೆ. ಆರೋಪಿ ಅದೇ ಗ್ರಾಮದ ಶಿವಯ್ಯ ಜಂಬಯ್ಯ ರುದ್ರಸ್ವಾಮಿಮಠ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ತನ್ನ ಮನೆಯ ಎದುರಿಗೆ ಇರುವ ಹೊಲದಲ್ಲಿ ಎಂದಿನಂತೆ ಮಂಗಳವಾರ ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದಾಳೆ. ಇದನ್ನು ನೋಡಿದ ಆರೋಪಿ ಆಕೆಯ ಬಾಯಿಗೆ ಬಟ್ಟೆ ಇಟ್ಟು ಅಪಹರಿಸಿಕೊಂಡು ಹೋಗಿದ್ದಾನೆ. ಮಗಳು ಮನೆಗೆ ಬರಲಿಲ್ಲವಲ್ಲ ಎಂದು ಪಾಲಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಸಂಜೆ ಆಕೆ ಮನೆಗೆ ಬಂದು ವಿಷಯ ತಿಳಿಸಿದಾಗಲೇ ಅತ್ಯಾಚಾರ ನಡೆದದ್ದು ಬಹಿರಂಗಗೊಂಡಿದೆ.

ಅತ್ಯಾಚಾರಿ ಆಕೆಯನ್ನು ವಿಕೃತವಾಗಿ ಬಳಸಿಕೊಂಡದ್ದು ಆಕೆಯ ಮೈಮೇಲೆ ಆಗಿರುವ ಗಾಯಗಳಿಂದ ತಿಳಿದು ಬಂದಿದೆ. ರಾತ್ರಿಯೇ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲು ಆಕೆಯ ಪಾಲಕರು ಮುಂದಾಗಿದ್ದರೂ ತಕ್ಷಣಕ್ಕೆ ಪ್ರಕರಣ ದಾಖಲಾಗಿಲ್ಲ. ಮರುದಿನ ಬರುವಂತೆ ಹೇಳಿ ಮರಳಿ ಪೊಲೀಸರು ಕಳಿಸಿದ್ದಾರೆ.

ಅತ್ಯಾಚಾರ ಎಸಗಿದ ಮೇಲೆ ಆಕೆಯ ಮೈಮೇಲಿದ್ದ ಚಿನ್ನದ ಆಭರಣಗಳನ್ನೂ ದೋಚಿದ್ದಾರೆ ಎಂದು ಪಾಲಕರು ಸುದ್ದಿಗಾರರಿಗೆ ತಿಳಿಸಿದರು. ಬುಧವಾರ ಬೆಳಗ್ಗೆ ಪ್ರಕರಣದ ಗಂಭೀರತೆ ಅರಿತು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತಂದ ಮೇಲೆ ಸಂಜೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳಿಸಿ ಕೊಡಲಾಗಿದೆ.

ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ :ಅಪ್ರಾಪ್ತೆಯ ಮೇಲೆ ವಿಕೃತವಾಗಿ ಅತ್ಯಾಚಾರ ಎಸಗಿರುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ನೊಂದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕು. ಸರ್ಕಾರದ ಎಲ್ಲ ಸೌಲಭ್ಯಗಳನ್ನೂ ದೊರಕಿಸಿ ಕೊಡಬೇಕು.

ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹ

ಇಲ್ಲಿನ ಪೊಲೀಸ್ ಠಾಣೆ ಎದುರು ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯು ಅನಕ್ಷರಸ್ಥಳಾಗಿದ್ದು ಕುರಿ ಕಾಯುತ್ತಿದ್ದಳು. ಈಚೆಗೆ ಆಕೆಯ ಕುರಿಗಳನ್ನು ಯಾರೋ ಕಳ್ಳತನ ಮಾಡಿದ್ದಾರೆ. ಹೀಗಾಗಿ, ಆಕೆ ಮನೆಯಲ್ಲೇ ಇದ್ದಳು. ಬಹಿರ್ದೆಸೆಗೆ ಹೋದಾಗ ಅಪಹರಿಸಿ ಸಂಜೆಯವರೆಗೂ ಅತ್ಯಾಚಾರ ಮಾಡಿ ನಂತರ ಮನೆಗೆ ಕಳಿಸಲಾಗಿದೆ.

ಇದರಲ್ಲಿ ಇನ್ನೂ 3-4 ಜನ ಇದ್ದಾರೆ. ತನ್ನ ಮೈಮೇಲಿನ ಬಂಗಾರದ ಒಡವೆ ದೋಚಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ತಿಳಿಸಿದ್ದಾಳೆ. ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.

ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ ಬಿ ಮುದೂರ, ಜಿಲ್ಲಾ ಸಂಚಾಲಕ ಹರೀಶ್ ನಾಟೀಕಾರ, ಮುಖಂಡರಾದ ಪ್ರಕಾಶ್ ಚಲವಾದಿ, ಬಸವರಾಜ ಸಿದ್ದಾಪುರ, ಶಿವು ಶಿವಪೂರ, ಭಗವಂತ ಕಬಾಡೆ, ತಿಪ್ಪಣ್ಣ ಗೋನಾಳ, ಮಲ್ಲು ತಳವಾರ, ದೇವರಾಜ ಹಂಗರಗಿ ಮತ್ತಿತರರು ಇದ್ದರು.

ABOUT THE AUTHOR

...view details